ಪಟಾಕಿಗಳ ಮೇಲೆ ರಾಷ್ಟ್ರೀಯ ನಿಷೇಧ ಹೇರಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಆದರೆ, ಇದರ ಬದಲಾಗಿ ಪರಿಸರ ಸ್ನೇಹಿ ಪಟಾಕಿಗಳ ಉತ್ಪಾದನೆಗೆ ಸಲಹೆ ಹಾಗೂ ಸರ ಪಟಾಕಿ ಉತ್ಪಾದನೆ ಮೇಲಿನ ನಿರ್ಬಂಧಕ್ಕೆ ಒಪ್ಪಿಗೆ ನೀಡಿದೆ.
ನವದೆಹಲಿ: ದೀಪಾವಳಿ ಹಬ್ಬ ಸೇರಿದಂತೆ ಇತರ ಸಂದರ್ಭಗಳಲ್ಲಿ ಸಿಡಿಸಲಾಗುವ ಪಟಾಕಿಗಳ ಮೇಲೆ ರಾಷ್ಟ್ರೀಯ ನಿಷೇಧ ಹೇರಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಆದರೆ, ಇದರ ಬದಲಾಗಿ ಪರಿಸರ ಸ್ನೇಹಿ ಪಟಾಕಿಗಳ ಉತ್ಪಾದನೆಗೆ ಸಲಹೆ ಹಾಗೂ ಸರ ಪಟಾಕಿ ಉತ್ಪಾದನೆ ಮೇಲಿನ ನಿರ್ಬಂಧಕ್ಕೆ ಒಪ್ಪಿಗೆ ನೀಡಿದೆ.
ಪರಿಸರ ಮಾಲಿನ್ಯ ತಡೆಗಾಗಿ ಯಾವುದೇ ರೀತಿಯ ಪಟಾಕಿಗಳ ಉತ್ಪಾದನೆ, ಮಾರಾಟ, ಮರು ಮಾರಾಟ ಮತ್ತು ಬಳಕೆ ಮೇಲೆ ರಾಷ್ಟಾ್ರದ್ಯಂತ ನಿಷೇಧ ಹೇರಬೇಕೆಂದು ಕೋರಿ ಸಲ್ಲಿಸಲಾದ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಎತ್ತಿಕೊಂಡಿತು.
ಈ ಸಂದರ್ಭದಲ್ಲಿ ಐದು ಪುಟಗಳ ಅಫಿಡವಿಟ್ ಅನ್ನು ಸುಪ್ರೀಂಗೆ ಸಲ್ಲಿಸಿದ ಕೇಂದ್ರ ಸರ್ಕಾರ, ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ಉಂಟಾಗುವ ಪರಿಸರ ಮಾಲಿನ್ಯ ತಡೆಗಾಗಿ ಐದು ಸಲಹೆಗಳನ್ನು ನೀಡಿದೆ.
ದೀಪಾವಳಿ ವೇಳೆ ಮಾಲಿನ್ಯ ತಡೆಗಾಗಿ ಕೈಗಾರಿಕೆ ಸಂಶೋಧನೆ ಹಾಗೂ ವಿಜ್ಞಾನ ಮಂಡಳಿ, ರಾಷ್ಟ್ರೀಯ ಪರಿಸರ ಸಂಶೋಧನಾ ಸಂಸ್ಥೆ, ಪಿಇಎಸ್‌ಒ ಮತ್ತು ಸಿಪಿಸಿಬಿ ಸಂಸ್ಥೆಗಳೊಂದಿಗೆ ಕಾರ್ಯ ನಿರ್ವಹಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ತನ್ನ ಅಫಿಡವಿಟ್‌ನಲ್ಲಿ ಸುಪ್ರೀಂಗೆ ತಿಳಿಸಿದೆ.
