ಕಾವೇರಿ ನೀರಿನ ಹಂಚಿಕೆಗೆ ತಾನು ರೂಪಿಸಿದ ಕರಡು ಯೋಜನೆಯನ್ನು ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬೀಳುವ ದಿನಕ್ಕೂ ಮುನ್ನ ದಿನ ಸುಪ್ರೀಂ ಕೋರ್ಟಿಗೆ ಕೇಂದ್ರ ಸರಕಾರ ಸಲ್ಲಿಸಿದೆ.

ನವದೆಹಲಿ: ಕಾವೇರಿ ನೀರಿನ ಹಂಚಿಕೆಗೆ ತಾನು ರೂಪಿಸಿದ ಕರಡು ಯೋಜನೆಯನ್ನು ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬೀಳುವ ದಿನಕ್ಕೂ ಮುನ್ನ ಸುಪ್ರೀಂ ಕೋರ್ಟಿಗೆ ಕೇಂದ್ರ ಸರಕಾರ ಸಲ್ಲಿಸಿದೆ.

Add Asianetnews Kannada as a Preferred SourcegooglePreferred

ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಯು.ಪಿ.ಸಿಂಗ್ ಖುದ್ದು ಹಾಜರಿರುವಂತೆ ಕೋರ್ಟ್ ಮೇ 8ರಂದು ಸಮನ್ಸ್ ಕಳುಹಿಸಿದ್ದು, ಸೋಮವಾರ ಕರಡು ಪ್ರತಿಯೊಂದಿಗೆ ಅವರು ಹಾಜರಿದ್ದರು.

ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಪೀಠ ಕರಡು ಪ್ರತಿಯನ್ನು ಸ್ವೀಕರಿಸಿದ್ದು, ಜಲ ಸ್ವಾಮ್ಯತೆ ಅಥವಾ ಕಾನೂನಾತ್ಮಕವಾಗಿ ಈ ಕರಡನ್ನು ಕೋರ್ಟ್ ಪರಿಗಣಿಸುವುದಿಲ್ಲ. ಕರ್ನಾಟಕ, ತಮಿಳು ನಾಡು, ಪುದುಚೆರಿ ಅಥವಾ ಕೇರಳದಿಂದ ಮತ್ತೊಂದು ರೀತಿಯ ಸುದೀರ್ಘ ಕಾನೂನು ಹೋರಾಟ ಬೇಡವೆಂದು ಹೇಳಿದ್ದಾರೆ.

ಮೇ 3ರಂದು ಕಾವೇರಿ ಸ್ಕೀಮ್ ಕುರಿತ ಕರಡು ಸಿದ್ಧಪಡಿಸಿ ಸಲ್ಲಿಸುವಂತೆ ಈ ಹಿಂದೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಆದರೆ, ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ್ತು ವಿವಿಧ ಸಚಿವರು ಹಾಗೂ ಪ್ರಧಾನಿ ಅಲಭ್ಯತೆ ಹಿನ್ನೆಲೆಯಲ್ಲಿ ಕರಡು ಸಲ್ಲಿಸರು ಕೇಂದ್ರ ಸರಕಾರ ಅಸಹಾಯಕತೆ ವ್ಯಕ್ತಪಡಿಸಿತ್ತು. ಸರಕಾರದ ಈ ವಿಳಂಬ ಧೋರಣೆಗೆ ಕೋರ್ಟ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. 

ಇದೀಗ ಕರ್ನಾಟಕ ವಿಧಾನಸಭೆಗೆ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಸರಕಾರ ಕರಡು ಪ್ರತಿಯನ್ನು ಸಲ್ಲಿಸಿದೆ.