ಇದೇ ವೇಳೆ, 5 ರು. ಹಾಗೂ 10 ರು. ನಾಣ್ಯಗಳನ್ನು ಇದೇ ದಿಗ್ಗಜರ ಸ್ಮರಣಾರ್ಥ ಹೊಸ ವಿನ್ಯಾಸದಲ್ಲಿ ಬಿಡುಗಡೆ ಮಾಡಲೂ ಅದು ನಿರ್ಧರಿಸಿದೆ. ಆದರೆ ಹಳೆಯ 5 ಹಾಗೂ 10 ರು. ನಾಣ್ಯಗಳ ಚಲಾವಣೆ ಅಬಾಧಿತವಾಗಿ ಮುಂದುವರಿಯಲಿದೆ.

ನವದೆಹಲಿ(ಸೆ.12): ಖ್ಯಾತ ಸಂಗೀತ ವಿದುಷಿ ಎಂ.ಎ. ಸುಬ್ಬುಲಕ್ಷ್ಮಿ ಹಾಗೂ ತಮಿಳುನಾಡಿನ ರಾಜಕಾರಣಿ ಡಾ. ಎಂ.ಜಿ. ರಾಮಚಂದ್ರನ್ ಅವರ ಜನ್ಮಶತಮಾನೋತ್ಸವ ನಿಮಿತ್ತ 100ರು. ಹೊಸ ನಾಣ್ಯ ಬಿಡುಗಡೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ನಾಣ್ಯ ಕಾಯ್ದೆ-2011ಕ್ಕೆ ತಿದ್ದುಪಡಿ ಮಾಡಲು ಅದು ನಿರ್ಧರಿಸಿದೆ.

ಇದೇ ವೇಳೆ, 5 ರು. ಹಾಗೂ 10 ರು. ನಾಣ್ಯಗಳನ್ನು ಇದೇ ದಿಗ್ಗಜರ ಸ್ಮರಣಾರ್ಥ ಹೊಸ ವಿನ್ಯಾಸದಲ್ಲಿ ಬಿಡುಗಡೆ ಮಾಡಲೂ ಅದು ನಿರ್ಧರಿಸಿದೆ. ಆದರೆ ಹಳೆಯ 5 ಹಾಗೂ 10 ರು. ನಾಣ್ಯಗಳ ಚಲಾವಣೆ ಅಬಾಧಿತವಾಗಿ ಮುಂದುವರಿಯಲಿದೆ.

100 ರು. ನಾಣ್ಯದಲ್ಲಿ ಅಶೋಕಸ್ತಂಭ ಇರಲಿದೆ. ಜತೆಗೆ ಸತ್ಯಮೇವ ಜಯತೆ ಎಂದು ಬರೆಯಲಾಗಿರುತ್ತದೆ. ದೇವನಾಗರಿಯಲ್ಲಿ ಭಾರತ ಎಂದು, ಇಂಗ್ಲಿಷ್‌ನಲ್ಲಿ ಇಂಡಿಯಾ ಎಂದು ಬರೆಯಲಾಗುತ್ತದೆ. ರುಪಾಯಿ ಚಿಹ್ನೆ (₹), 100 ಎಂಬ ಅಂಕಿ ಇರಲಿದೆ. ನಾಣ್ಯದ ಇನ್ನೊಂದು ಬದಿಯಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಚಿತ್ರ ಕೆಲ ನಾಣ್ಯಗಳಲ್ಲಿ ಇರಲಿದ್ದು, ಅವರ ಜನ್ಮಶತಮಾನೋತ್ಸವ (1912-2016) ಎಂದು ಬರೆಯಲಾಗಿರುತ್ತದೆ. ಇನ್ನು ಕೆಲವು ನಾಣ್ಯಗಳಲ್ಲಿ ಎಂಜಿಆರ್ ಚಿತ್ರ ಇರಲಿದ್ದು, (1917-2017) ಎಂದು ಬರೆಯಲಾಗುತ್ತದೆ.