ನವದೆಹಲಿ(ಮೇ.07): ಯುಪಿಎ ಅವಧಿಯಲ್ಲೂ ಹಲವು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು ಎಂಬ ಕಾಂಗ್ರೆಸ್ ಪ್ರತಿಪಾದನೆಗೆ ಯಾವುದೇ ಸಾಕ್ಷ್ಯ ಇದ್ದಂತಿಲ್ಲ. ಕಾರಣ 2016ಕ್ಕಿಂತಲೂ ಮೊದಲು ಸರ್ಜಿಕಲ್ ದಾಳಿ ನಡೆದ ಕುರಿತು ಯಾವುದೇ ಪುರಾವೆ ತನ್ನ ಬಳಿ ಇಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ಆರ್‌ಟಿಐ ಕಾರ್ಯಕರ್ತ ರೋಹಿತ ಚೌಧರಿ, ಈ ಕುರಿತು ಮಾಹಿತಿ ಕೋರಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದರು. 2016ಕ್ಕೂ ಮೊದಲು ಭಾರತೀಯ ಸೇನೆಯಿಂದ ಸರ್ಜಿಕಲ್ ದಾಳಿ ನಡೆದಿತ್ತೇ ಎಂದು ರೋಹಿತ್ ಚೌಧರಿ ಪ್ರಶ್ನಿಸಿದ್ದರು.

ರೋಹಿತ್ ಪತ್ರಕ್ಕೆ ಉತ್ತರ ನೀಡಿರುವ ಕೇಂದ್ರ ಗೃಹಸಚಿವಾಲಯ, 2016ಕ್ಕೂ ಮೊದಲು ಸೇನೆಯಿಂದ ಸರ್ಜಿಕಲ್ ದಾಳಿ ನಡೆದ ಕುರಿತು ಯಾವುದೇ ಪುರಾವೆ ತನ್ನ ಬಳಿ ಇಲ್ಲ ಎಂದು ಸ್ಪಷ್ಟಪಡಿಸಿದೆ.