Asianet Suvarna News Asianet Suvarna News

ವಿಡಿಯೋ ಗೇಮ್‌ ಎಂದು ಸೇನೆಗೆ ಮೋದಿ ಅವಮಾನ : ರಾಹುಲ್

ಪ್ರಧಾನಿ ಮೋದಿ ಭಾರತೀಯ ಸೇನೆಗೆ ಅವಮಾನ ಮಾಡಿದ್ದಾರೆ ಎಂದು ರಾಹುಲ್ ಟೀಕಾ ಪ್ರಹಾರ ನಡೆಸಿದ್ದಾರೆ.

Rahul Gandhi Slams PM Modi On UPA surgical strike issue
Author
Bengaluru, First Published May 5, 2019, 7:39 AM IST

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಸರ್ಜಿಕಲ್‌ ದಾಳಿಗಳು ಕೇವಲ ಕಾಗದದ ಮೇಲಷ್ಟೇ. ಅವೆಲ್ಲಾ ವಿಡಿಯೋ ಗೇಮ್‌ಗಳಿದ್ದಂತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ, ಭಾರತೀಯ ಸೇನೆಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ. ಜೊತೆಗೆ ಭಾರತೀಯ ಸೇನೆ, ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಆಸ್ತಿಯಲ್ಲ ಎಂದೂ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ಇಲ್ಲಿನ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ‘ಭಯೋತ್ಪಾದನೆ ಬೃಹತ್‌ ವಿಷಯ. ಮೋದಿಗಿಂತ ಹೆಚ್ಚು ಕಠಿಣವಾಗಿ ಈ ವಿಷಯವನ್ನು ಕಾಂಗ್ರೆಸ್‌ ನಿರ್ವಹಿಸಬಲ್ಲದು. ‘ಜೈಷ್‌ ಎ ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ನನ್ನು ಬಿಡುಗಡೆ ಮಾಡಿದ್ದು ಯಾರು? ಆತ ಪಾಕಿಸ್ತಾನಕ್ಕೆ ಹೋಗಿದ್ದಾದರೂ ಹೇಗೆ? ಅವನನ್ನೇದರೂ ಕಾಂಗ್ರೆಸ್‌ ಪಕ್ಷ ಕಳುಹಿಸಿಕೊಟ್ಟಿತೇ? ಉಗ್ರವಾದದ ಜೊತೆ, ಉಗ್ರರ ಜೊತೆ ಚೌಕಾಸಿ ನಡೆಸಿದ್ದು ಯಾರು? ಭಯೋತ್ಪಾದನೆ ವಿಷಯದಲ್ಲಿ ಕೇಸರಿ ಪಕ್ಷವು ರಾಜೀ ಮಾಡಿಕೊಂಡಿದೆ ಎಂದು, ಕಂದಹಾರ್‌ ವಿಮಾನ ಅಪಹರಣ ಪ್ರಕರಣದ ವೇಳೆ ಎನ್‌ಡಿಎ ಸರ್ಕಾರ ಉಗ್ರ ಮಸೂದ್‌ನನ್ನು ಬಿಡುಗಡೆ ಮಾಡಿದ್ದನ್ನು ಕಟುವಾಗಿ ಟೀಕಿಸಿದರು.

ಇದೇ ವೇಳೆ ಯುಪಿಎ ಸರ್ಕಾರ ಕೂಡಾ 6 ಸರ್ಜಿಕಲ್‌ ದಾಳಿ ನಡೆಸಿತ್ತು ಎಂಬ ಕಾಂಗ್ರೆಸ್‌ ನೀಡಿದ ಸಾಕ್ಷ್ಯಗಳ ಬಗ್ಗೆ ವ್ಯಂಗ್ಯವಾಡಿದ್ದ ಪ್ರಧಾನಿ ಮೋದಿ ಹೇಳಿಕೆ ಟೀಕಿಸಿದ ರಾಹುಲ್‌ ಗಾಂಧಿ, ಯುಪಿಎ ಸರ್ಕಾರದ ಸರ್ಜಿಕಲ್‌ ದಾಳಿಯನ್ನು ವಿಡಿಯೋ ಗೇಮ್‌ಗಳಿಗೆ ಹೋಲಿಸುವ ಮೂಲಕ ಪ್ರಧಾನಿ ಮೋದಿ ಭಾರತೀಯ ಸೇನೆಯನ್ನು ಅವಮಾನಿಸಿದ್ದಾರೆ. ಇದು ಕಾಂಗ್ರೆಸ್‌ಗೆ ಮಾಡಿದ ಅವಮಾನವಲ್ಲ, ಬದಲಾಗಿ ಸೇನೆಗೆ ಮಾಡಿದ ಅವಮಾನ ಎಂದು ಟೀಕಿಸಿದರು.

ಮೋದಿ ಸರ್ಕಾರ ಸೇನೆಯನ್ನು ರಾಜಕೀಯ ಮೈಲೇಜ್‌ಗಾಗಿ ಬಳಸಿಕೊಳ್ಳುತ್ತಿದೆ. ಸೇನೆಯ ಸಾಹಸದ ಹಿರಿಮೆಯನ್ನು ತಾನು ಪಡೆದುಕೊಳ್ಳುತ್ತಿದೆ. ಸೇನೆ, ನೌಕಪಡೆ ಮತ್ತು ವಾಯಪಡೆಯನ್ನು ಪ್ರಧಾನಿ ಮೋದಿ ತಮ್ಮ ವೈಯಕ್ತಿಕ ಆಸ್ತಿ ಎಂದು ಭಾವಿಸಿದ್ದಾರೆ ಎಂದು ಟೀಕಿಸಿದರು.

ಮೋದಿ ಹೇಳಿದ್ದೇನು?:  ಶುಕ್ರವಾರ ಚುನಾವಣಾ ರಾರ‍ಯಲಿ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, 4 ತಿಂಗಳ ಹಿಂದೆ ಒಬ್ಬ ಕಾಂಗ್ರೆಸ್ಸಿಗರು ಯುಪಿಎ ಕಾಲದಲ್ಲಿ 3 ಬಾರಿ ಸರ್ಜಿಕಲ್‌ ದಾಳಿ ಮಾಡಿದ್ದೇವೆ ಎಂದಿದ್ದರು. ಈಗ ಮತ್ತೊಬ್ಬರು 6 ದಾಳಿ ಎನ್ನುತ್ತಿದ್ದಾರೆ. ನಾಲ್ಕೇ ತಿಂಗಳಲ್ಲಿ ದಾಳಿಗಳ ಸಂಖ್ಯೆ 3ರಿಂದ 6ಕ್ಕೇರಿಕೆಯಾಗಿದೆ. ಚುನಾವಣೆ ಮುಗಿಯುವಷ್ಟರಲ್ಲಿ ಈ ಸಂಖ್ಯೆ 600ಕ್ಕೆ ಹೆಚ್ಚಳವಾಗಿರುತ್ತದೆ. ಸರ್ಜಿಕಲ್‌ ಸ್ಟೈಕ್‌ಗಳು ಕೇವಲ ಕಾಗದದ ಮೇಲಷ್ಟೇ ಇದ್ದರೆ ಏನು ಪ್ರಯೋಜನ? ಕಾಂಗ್ರೆಸ್‌ ನಾಯಕರು ವಿಡಿಯೋ ಗೇಮ್‌ ಆಡುತ್ತಿರುವಂತಿದೆ. ಹೀಗಾಗಿ ಸರ್ಜಿಕಲ್‌ ಸ್ಟೆ್ರೖಕ್‌ಗಳನ್ನೂ ಅದೇ ರೀತಿ ನೋಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

Follow Us:
Download App:
  • android
  • ios