ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ವಿಐಪಿಗಳಿಗೆ ನೀಡುವ ವಿಶೇಷ ಭದ್ರತಾ ಸೌಲಭ್ಯವನ್ನು 475 ಮಂದಿಗೆ ಹೆಚ್ಚಿಸಿದೆ. ಕಳೆದ ಯುಪಿಎ ಸರ್ಕಾರ 350 ಜನರಿಗೆ ಒದಗಿಸಿದ್ದ ವಿಶೇಷ ಭದ್ರತೆಯನ್ನು ಮೋದಿ ಸರ್ಕಾರ 475 ಮಂದಿಗೆ ಹೆಚ್ಚಿಸಿದೆ.
ನವದೆಹಲಿ (ಸೆ.15): ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ವಿಐಪಿಗಳಿಗೆ ನೀಡುವ ವಿಶೇಷ ಭದ್ರತಾ ಸೌಲಭ್ಯವನ್ನು 475 ಮಂದಿಗೆ ಹೆಚ್ಚಿಸಿದೆ. ಕಳೆದ ಯುಪಿಎ ಸರ್ಕಾರ 350 ಜನರಿಗೆ ಒದಗಿಸಿದ್ದ ವಿಶೇಷ ಭದ್ರತೆಯನ್ನು ಮೋದಿ ಸರ್ಕಾರ 475 ಮಂದಿಗೆ ಹೆಚ್ಚಿಸಿದೆ.
ಪ್ರಮುಖ ರಾಜಕಾರಣಿಗಳು ಹಾಗೂ ಅವರ ಮಕ್ಕಳು, ಧಾರ್ಮಿಕ ಗುರುಗಳು, ಉದ್ಯಮಿಗಳು ಸೇರಿದಂತೆ ಸಾಕಷ್ಟು ಜನರಿಗೆ ಭದ್ರತೆ ಒದಗಿಸಲಾಗಿದೆ. ಕೆಲವು ರಾಜಕಾರಣಿಗೆ ನೀಡಿರುವ ಎನ್’ಎಸ್’ಜಿ ಭದ್ರತೆಯನ್ನು ವಾಪಸ್ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಛತ್ತಿಸ್’ಘಡ್ ಮಾಜಿ ಸಿಎಂ ರಮಣ್ ಸಿಂಗ್ ಹಾಗೂ ಕರುಣಾನಿಧಿಗೆ ನೀಡಲಾಗಿರುವ ಭದ್ರತೆಯನ್ನು ಹಿಂತೆಗೆದುಕೊಳ್ಳಲಿದೆ.
ಅವರವರಿಗೆ ಇರುವ ಬೆದರಿಕೆ ಆಧಾರದ ಮೇಲೆ ಸರ್ಕಾರ X ನಿಂದ Z ವರೆಗೆ ಭದ್ರತೆ ಒದಗಿಸಲಿದೆ. Z ಕ್ಯಾಟಗರಿ ವಿಐಪಿಗಳಿಗೆ 30 ಗಾರ್ಡ್’ಗಳು, Y+ ಕ್ಯಾಟಗರಿಯವರಿಗೆ 11 ಮಂದಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ. ಬಾಬಾ ರಾಮ್’ದೇವ್, ಮಾತಾ ಅಮೃತಾನಂದಮಯಿಗೆ Z ಕ್ಯಾಟಗರಿ ಭದ್ರತೆ, ರಾಮಜನ್ಮಭೂಮಿ ಮಂಡಳಿ ಅಧ್ಯಕ್ಷ ನೃತ್ಯ ಗೋಪಾಲ್ ದಾಸ್, ವಿವಾದಿತ ಸಚಿವ ಸಾಕ್ಷಿ ಮಹಾರಾಜ್’ಗೆ Y ಕ್ಯಾಟಗರಿ ಭದ್ರತೆ ಒದಗಿಸಲಾಗಿದೆ.
