ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಶೇ.1 ರಿಂದ ಶೇ.5 ರಷ್ಟು ಕೇಂದ್ರ ಸರ್ಕಾರ ಹೆಚ್ಚಿಸಿರುವುದಾಗಿ ಇಂದು ಘೋಷಿಸಿದೆ.

ನವದೆಹಲಿ (ಸೆ.12): ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಶೇ.1 ರಿಂದ ಶೇ.5 ರಷ್ಟು ಕೇಂದ್ರ ಸರ್ಕಾರ ಹೆಚ್ಚಿಸಿರುವುದಾಗಿ ಇಂದು ಘೋಷಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಸಂಸದೀಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. 50 ಲಕ್ಷ ಉದ್ಯೋಗಿಗಳು ಹಾಗೂ 61 ಲಕ್ಷ ಪಿಂಚಣಿದಾರರು ಇದರ ಲಾಭವನ್ನು ಪಡೆಯಲಿದ್ದಾರೆ. ಈ ನೂತನ ನೀತಿ ಜು.01 ರಿಂದ ಅನ್ವಯವಾಗಲಿದೆ. ಅದೇ ರೀತಿ ಖಾಸಗಿ ವಲಯದ ಉದ್ಯೋಗಿಗಳಿಗೆ ಗ್ರಾಚುಯಿಟಿಯನ್ನು ಹೆಚ್ಚಿಸುವ ಮಸೂದೆಗೂ ಕೂಡಾ ಅನುಮೋದನೆ ನೀಡಲಾಗಿದೆ.

ಕೇಂದ್ರ ಸರ್ಕಾರದ ಈ ಕ್ರಮವನ್ನು ತಜ್ಞರು ಸ್ವಾಗತಿಸಿದ್ದಾರೆ. ಗ್ರಾಚುಯಿಟಿ ಹೆಚ್ಚಿಸುವ ವಿಚಾರ ಬಹಳ ಹಿಂದಿನಿಂದಲೂ ಹಾಗೆ ಉಳಿದುಕೊಂಡಿತ್ತು. ಅದಕ್ಕಿಂದು ಅನುಮೋದನೆ ಸಿಕ್ಕಿದೆ. ಇದು ಹಣದುಬ್ಬರವನ್ನು ನಿಯಂತ್ರಿಸುತ್ತದೆ. ಆದರೆ ತುಟ್ಟಿಭತ್ಯೆ ಹೆಚ್ಚಳದಿಂದ ಆರ್ಥಿಕತೆಗೆ ಉತ್ತೇಜನ ಸಿಗುವುದಿಲ್ಲ ಎಂದು ಆರ್ಥಿಕ ತಜ್ಞ ಡಿ ಕೆ ಜೋಷಿ ಅಭಿಪ್ರಾಯಪಟ್ಟಿದ್ದಾರೆ.