ನವದೆಹಲಿ(ಜು.04): 2014-15ರಿಂದ ಇಲ್ಲಿಯವರೆಗೆ ಭಾರತೀಯ ವಾಯುಪಡೆಗೆ ಸೇರಿದ ಒಟ್ಟು 44 ಯುದ್ಧ ವಿಮಾನಗಳು ನಾಶ ಹೊಂದಿದ್ದು, ವಿವಿಧ ದುರ್ಘಟನೆಗಳಲ್ಲಿ ಸುಮಾರು 46 ಸಿಬ್ಬಂದಿ ಹತರಾಗಿದ್ದಾರೆ. 

ಇದು ಕೇಂದ್ರ ಸರ್ಕಾರ ಲೋಕಸಭೆಗೆ ನೀಡಿದ ಬೆಚ್ಚಿ ಬೀಳಿಸುವ ಮಾಹಿತಿ. ವಿವಿಧ ದುರ್ಘಟನೆಗಳಲ್ಲಿ ಹೆಲಿಕಾಪ್ಟರ್, ಸರಂಜಾಮು ವಾಹನ, ತರಬೇತಿ ವಿಮಾನ ಸೇರಿದಂತೆ ಒಟ್ಟು 44 ವಿಮಾನಗಳು ನಾಸ ಹೊಂದಿವೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಮಾಹಿತಿ ನೀಡಿದ್ದಾರೆ.

ಒಟ್ಟು 26 ಯುದ್ಧ ವಿಮಾನ, 6 ಹೆಲಿಕಾಪ್ಟರ್'ಗಳು, 9 ತರಬೇತಿ ವಿಮಾನಗಳು, 3 ಸಾರಿಗೆ ವಿಮಾನಗಳು ವಿವಿಧ ದುರ್ಘಟನೆಯಲ್ಲಿ ನಾಶ ಹೊಂದಿವೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ.

ಇನ್ನು ಈ ದುರ್ಘಟನೆಗಳಲ್ಲಿ ಭಾರತೀಯ ವಾಯುಪಡೆ ತನ್ನ 46 ಸಿಬ್ಬಂದಿ ಕಳೆದುಕೊಂಡಿದ್ದು, ಇದರಲ್ಲಿ 12 ಪೈಲೆಟ್'ಗಳು, 7 ಏರ್ ಕ್ರ್ಯೂ ಹಾಗೂ 27 ವಾಯುಸೇನಾ ಸಿಬ್ಬಂದಿ ಸೇರಿದ್ದಾರೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ.