‘ದೇಶದ ವಿಧವೆಯರ ಬಗ್ಗೆ ನಿಮಗೇನೂ ಕಾಳಜಿಯಿಲ್ಲ, ವಿಧವೆಯರ ಬಗ್ಗೆ ನಮಗೇನೂ ಚಿಂತೆಯಿಲ್ಲವೆಂದು ಅಫಿಡಾವಿಟ್ ಸಲ್ಲಿಸಿಬಿಡಿ. ಅವರಿಗಾಗಿ ನೀವೇನೂ ಮಾಡಿಲ್ಲ,’ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.

ನವದೆಹಲಿ (ಏ.23): ವಿಧವೆಯರ ಶ್ರೇಯೋಭಿವೃದ್ಧಿಗಾಗಿ ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂಬ ಕಾರಣಕ್ಕಾಗಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ರೂ.1 ಲಕ್ಷ ದಂಡ ವಿಧಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ದೇಶದ ವಿಧವೆಯರ ಬಗ್ಗೆ ನಿಮಗೇನೂ ಕಾಳಜಿಯಿಲ್ಲ, ವಿಧವೆಯರ ಬಗ್ಗೆ ನಮಗೇನೂ ಚಿಂತೆಯಿಲ್ಲವೆಂದು ಅಫಿಡಾವಿಟ್ ಸಲ್ಲಿಸಿಬಿಡಿ. ಅವರಿಗಾಗಿ ನೀವೇನೂ ಮಾಡಿಲ್ಲ,’ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.

ಮಥುರಾ, ಬೃಂದಾವನ ಸೇರಿದಂತೆ ದೇಶದ ತರೆಡೆ ಇರುವ ವಿಧವೆರಿಗಾಗಿ ಯೋಜನೆಗಳನ್ನು ರೂಪಿಸುವಂತೆ ಸರ್ಕಾರಕ್ಕೆ ಈ ಹಿಂದೆ ಕೋರ್ಟ್ ಸೂಚಿಸಿತ್ತು. ಆದರೆ ಅದನ್ನು ಪಾಲಿಸದೇ ಕೇಂದ್ರ ಸರ್ಕಾರ ಇನ್ನಷ್ಟು ಸಮಯಾವಕಾಶ ಕೇಳಿದಾಗ ಸಿಡಿಮಿಡಿಗೊಂಡ ಕೋರ್ಟ್, ರೂ.1 ಲಕ್ಷ ದಂಡವನ್ನು ವಿಧಿಸಿದೆ.