ಪೀಯೂಷ್ ಮತ್ತು ದೇವೇಗೌಡರು  ಕಳೆದ ವಾರ ಹಾಸನದ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ದೇವೇಗೌಡರು ಪೀಯೂಷ್ ಗೋಯಲ್ ಬಳಿ ಸಮಯ ಕೇಳಿದಾಗ ‘ಅಯ್ಯೋ ನೀವು ಹೇಳಿದಲ್ಲಿಗೆ ನಾನು ಬರುತ್ತೇನೆ’ ಎಂದು ಪೀಯೂಷ್ ಗೋಯಲ್ ಅವರೇ ದೇವೇಗೌಡರ ಮನೆಗೆ ಬಂದು ಅರ್ಧ ಗಂಟೆ ಮಾತನಾಡಿಸಿ ಹೋಗಿದ್ದಾರೆ.

ನವದೆಹಲಿ (ಜ.09): ಪೀಯೂಷ್ ಮತ್ತು ದೇವೇಗೌಡರು ಕಳೆದ ವಾರ ಹಾಸನದ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ದೇವೇಗೌಡರು ಪೀಯೂಷ್ ಗೋಯಲ್ ಬಳಿ ಸಮಯ ಕೇಳಿದಾಗ ‘ಅಯ್ಯೋ ನೀವು ಹೇಳಿದಲ್ಲಿಗೆ ನಾನು ಬರುತ್ತೇನೆ’ ಎಂದು ಪೀಯೂಷ್ ಗೋಯಲ್ ಅವರೇ ದೇವೇಗೌಡರ ಮನೆಗೆ ಬಂದು ಅರ್ಧ ಗಂಟೆ ಮಾತನಾಡಿಸಿ ಹೋಗಿದ್ದಾರೆ.

Add Asianetnews Kannada as a Preferred SourcegooglePreferred

ಮೊದಲಿನ ಹತ್ತು ನಿಮಿಷದ ನಂತರ ನಿಮ್ಮ ಜೊತೆ ಪರ್ಸನಲ್ ಆಗಿ ಮಾತನಾಡಬೇಕು ಎಂದು ರೇವಣ್ಣ ಅವರನ್ನು ಹೊರಗೆ ಕಳುಹಿಸಿದ ಪೀಯೂಷ್ ಗೋಯಲ್ ದೇವೇಗೌಡರ ಜೊತೆ ಒನ್ ಟು ಒನ್ ಮಾತನಾಡಿದ್ದಾರೆ. ಅದೇನು ಮಾತನಾಡಿಕೊಂಡರೋ ಗೊತ್ತಿಲ್ಲ. ಆದರೆ ದೇವೇಗೌಡ ಬಹಳ ದೊಡ್ಡ ನಾಯಕ ಎಂದು ಪೀಯೂಷ್ ಮಾತ್ರ ಬಹಳ ಖುಷಿಯಿಂದ ಪತ್ರಕರ್ತರ ಎದುರು ಮಾತನಾಡುತ್ತಿದ್ದಾರೆ. ಅಂದ ಹಾಗೆ ಇದೇ ಪೀಯೂಷ್ ಗೋಯಲ್ ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟೈಮ್ ಕೊಟ್ಟು ಕೂಡ ಭೇಟಿ ಆಗಿರಲಿಲ್ಲ. ಅಷ್ಟೇ ಅಲ್ಲ, ಸಿದ್ದರಾಮಯ್ಯ ಫೋನ್ ಮೇಲೆ ಫೋನ್ ಮಾಡಿದರೂ ವಾಪಸ್ ಫೋನ್ ಮಾಡುವ ಸೌಜನ್ಯ ಕೂಡ ತೋರಿಸಿರಲಿಲ್ಲ. ಆದರೆ ಅತಂತ್ರ ವಿಧಾನಸಭೆ ಸಾಧ್ಯತೆಗಳು ಗೋಚರಿಸುತ್ತಿರುವಾಗ ಪೀಯೂಷ್ ಗೋಯಲ್ ಸುಮ್ಮನೆ ದೇವೇಗೌಡರ ಮನೆಗೆ ಬಂದು ಬರೀ ಚಹಾ ಕುಡಿದು ಹೋಗಿದ್ದಾರೆ ಎಂದರೆ ನಂಬುವುದು ಕಷ್ಟ.