ಮೋದಿ ಬಸವಣ್ಣನವರ ಭಕ್ತರಾ?ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡ್ತಾರಾ?

ಮೋದಿ ಬಸವಣ್ಣನವರ ಭಕ್ತರಾ?, ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡ್ತಾರಾ? ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳುವುದೇನು?

Central govt recognises Lingayat as separate religion says Jaya Mruthyunjaya Swamiji

ಬೀದರ್, [ಅ.19]: ಮುಂದೆ ಲೋಕಸಭೆ ಚುನಾವಣೆ ಬರುತ್ತಿದ್ದು, ಕೇಂದ್ರ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುತ್ತೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೀದರ್‌ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಶ್ರೀಗಳು, ಪ್ರಧಾನಿ ಕೂಡ ಬಸವಣ್ಣನವರ ಭಕ್ತರು. ಹಾಗಾಗಿ  ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುತ್ತಾರೆ. ಒಂದು ವೇಳೇ ಲಿಂಗಾಯತ ಧರ್ಮಕ್ಕೆ ನ್ಯಾಯಾ ಸಿಗದಿದ್ದರೆ ಸುಪ್ರಿಂ ಕೋರ್ಟ್ ಮೊರೆ ಹೋಗಲಾಗುವುದು ಎಂದು ಹೇಳಿದರು.

ಧರ್ಮ ಒಡೆದಿದ್ದಕ್ಕೆ ಡಿಕೆಶಿ ಪಶ್ಚಾತ್ತಾಪ

ಸಚಿವ ಡಿ.ಕೆ ಶಿವಕುಮಾರ್ ಯಾರದೋ ಮಾತು ಕೆಳಿ ಇಂತಹ ಹೇಳಿಕೆ ನೀಡಿದ್ದಾರೆ, ಲಿಂಗಾಯತ ಸಮುದಾಯದ ಹೋರಾಟದ ಹೊಟ್ಟೆ ಕಿಚ್ಚಿನಿಂದ ಸಚಿವ ಡಿ.ಕೆ ಶಿ ಬಾಲಿಸತನ ಹೇಳಿಕೆ ನೀಡಿದ್ದಾರೆ. ಯಾರದೋ ಒತ್ತಡ ಯಾರದೋ ಮಾತು ಕೇಳಿ ಇಂತಹ ಹೇಳಿಕೆ ಸಚಿವರು ನೀಡಬಾರದಿತ್ತು.

ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ರಾಜ್ಯದಲ್ಲಿ ನಡೆಯುತ್ತಿವೆ ಆದರೆ ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಇಂತಹ ಹೇಳಿಕೆ ನೀಡಬಾರದು, ಅವರದೇ ಸರ್ಕಾರ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡುತ್ತೆ ಅದೇ ಸರ್ಕಾರದ ಸಚಿವರು ಹೀಗೆ ಹೇಳುವದು ಎಷ್ಟರ ಮಟ್ಟಿಗೆ ಸರಿ ಎಂದು  ಅಸಮಾಧಾನ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios