Asianet Suvarna News Asianet Suvarna News

ಕೇಂದ್ರ ಸರ್ಕಾರದ ಮೊರೆ ಹೋದ ಬಿಡಿಎಗೆ 'ಬಿಗ್' ಶಾಕ್!

ಕಡೆಗೂ ಬೆಂಗಳೂರಿನ ಬೆಳ್ಳಂದೂರು ಕೆರೆ, ಹಸಿರು ನ್ಯಾಯಾಲಯದ ಕೃಪೆಯಿಂದ ಸ್ವಚ್ಛಗೊಳ್ಳುತ್ತಿದೆ. ಆದರೆ, ಈಗ ಸ್ವಚ್ಛ ಕೆಲಸಕ್ಕೆ ಭಾರೀ ವಿಘ್ನವೊಂದು ಎದುರಾಗಿದೆ. ಅದೇನು ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

Central Govt Gave a Big Shock To BDA

ಬೆಂಗಳೂರು(ಮೇ.26): ಕಡೆಗೂ ಬೆಂಗಳೂರಿನ ಬೆಳ್ಳಂದೂರು ಕೆರೆ, ಹಸಿರು ನ್ಯಾಯಾಲಯದ ಕೃಪೆಯಿಂದ ಸ್ವಚ್ಛಗೊಳ್ಳುತ್ತಿದೆ. ಆದರೆ, ಈಗ ಸ್ವಚ್ಛ ಕೆಲಸಕ್ಕೆ ಭಾರೀ ವಿಘ್ನವೊಂದು ಎದುರಾಗಿದೆ. ಅದೇನು ಅಂತೀರಾ? ಹಾಗಾದರೆ ಈ ಸ್ಟೋರಿ ಓದಿ.

ಏಪ್ರಿಲ್​ 20 ರಿಂದ ಬೆಳ್ಳಂದೂರು ಕೆರೆ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಹಸಿರು ನ್ಯಾಯಾಲಯದ ಆದೇಶದಂತೆ ಬಿಡಿಎ ಹೈದರಾಬಾದ್​ ಮೂಲದ ಕಂಪನಿಗೆ ಟೆಂಡರ್​ ನೀಡಿದ್ದು ಕ್ಲೀನಿಂಗ್ ಕೂಡ ಭರದಿಂದ ಸಾಗಿದೆ. ಆದರೆ, ಕೆರೆ ಸಂಪೂರ್ಣವಾಗಿ ಸ್ವಚ್ಛ ಆಗಬೇಕಾದರೆ ಸುಮಾರು 400 ಕೋಟಿ ರೂಪಾಯಿ ಬೇಕಾಗುತ್ತದೆ. ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಭರಿಸುವುದು ಹೇಗೆ ಎನ್ನುವ ಪ್ರಶ್ನೆ  ಬಿಡಿಎ ಅಧಿಕಾರಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕೆರೆ ಸ್ವಚ್ಛತೆಗೆ 600 ಕೋಟಿ ರೂಪಾಯಿ ಅನುದಾನ ನೀಡಿ ಅಂತ ಬಿಡಿಎ ಅಧಿಕಾರಿಗಳು ಕೇಂದ್ರ ಸರ್ಕಾರದ ಮೊರೆ ಹೋಗಿದ್ದರು. ಆದರೆ, ಕೇಂದ್ರ ಸರ್ಕಾರ, ನಿಮ್ಮ ರಾಜ್ಯದ ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳಿ ಅಂತ ಬಿಡಿಎ ಅಧಿಕಾರಿಗಳಿಗೆ ಶಾಕ್​ ಕೊಟ್ಟಿದೆ. ಹೀಗಾಗಿ 400 ಕೋಟಿ ರೂಪಾಯಿ ವೆಚ್ಚಕ್ಕೆ ಬಿಡಿಎ ಮುಂದಾಗಿದೆ..

ಕೆರೆ ಹಾಳಾಗಲು ಕೆರೆ ಸುತ್ತಲಿನ ಅಪಾರ್ಟ್​​ಮೆಂಟ್​, ಕಂಪನಿಗಳೇ ಕಾರಣ. ಇವರಿಂದಲೇ ಕೆರೆ ಶುದ್ಧೀಕರಣ ಕಾರ್ಯಕ್ಕೆ ಹಣ ವಸೂಲಿ ಮಾಡಬೇಕು ಎನ್ನುವುದು ಕೆಲವರ ವಾದ. ಅಷ್ಟೇ ಅಲ್ಲದೆ ಬಿಬಿಎಂಪಿ, ಜಲಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಬೆಳ್ಳಂದೂರು ಕೆರೆ ಸ್ವಚ್ಛತೆ ವಿಷಯದಲ್ಲಿ ಹಿಂದೇಟು ಹಾಕುತ್ತಿವೆ. ಬಿಡಿಎ ಜೊತೆ ಬಿಬಿಎಂಪಿ, ಜಲಮಂಡಳಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಮನಸು ಮಾಡಿದರೆ ಬೆಳ್ಳಂದೂರು ಕೆರೆಯ ಜೀರ್ಣೋದ್ಧಾರ ಕಾಮಗಾರಿ  ಮತ್ತಷ್ಟು ವೇಗ ಪಡೆಯಲಿದೆ. ಒಟ್ಟಿನಲ್ಲಿ  ದೊಡ್ಡ ಜವಾಬ್ದಾರಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೇಗೆ ನಿಭಾಯಿಸುತ್ತೆ ಎನ್ನುವುದೇ ಸದ್ಯದ ಕುತೂಹಲ.

 

Follow Us:
Download App:
  • android
  • ios