390 ಕ್ಯಾನ್ಸರ್ ಔಷಧಗಳ ದರ ಇಳಿಸಿದ ಸರ್ಕಾರ | 390 ಕ್ಯಾನ್ಸರ್ ಔಷಧಗಳ ಗರಿಷ್ಠ ಮಾರಾಟ ದರವನ್ನು ಶೇ.87ರ ವರೆಗೂ ಇಳಿಕೆ ಮಾಡಲಾಗಿದೆ.
ನವದೆಹಲಿ (ಮಾ. 09): ದರ ನಿಯಂತ್ರಣ ಪಟ್ಟಿಗೆ ಒಳಪಡದ 390 ಕ್ಯಾನ್ಸರ್ ಔಷಧಗಳ ಗರಿಷ್ಠ ಮಾರಾಟ ದರವನ್ನು ಶೇ.87ರ ವರೆಗೂ ಇಳಿಕೆ ಮಾಡಲಾಗಿದೆ.
ಇದರಿಂದಾಗಿ ಕ್ಯಾನ್ಸರ್ ರೋಗಿಗಳಿಗೆ ವಾರ್ಷಿಕ 800 ಕೋಟಿ ರು. ಉಳಿತಾಯವಾಗಲಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ. ರಾಷ್ಟ್ರೀಯ ಔಷಧ ದರ ಪ್ರಾಧಿಕಾರ ಫೆ.27ರಂದು ದರ ನಿಯಂತ್ರಣಕ್ಕೆ ಒಳಪಡದ 42 ಕ್ಯಾನ್ಸರ್ ಔಷಧಗಳನ್ನು ದರ ನಿಯಂತ್ರಣಕ್ಕೆ ಒಳಪಡಿಸಿ, ವ್ಯಾಪಾರ ಅಂತರ ಶೇ.30ಕ್ಕೆ ಮಿತಿಗೊಳಿಸಿತ್ತು.
ಪರಿಷ್ಕೃತ ದರ ಮಾ.8ರಿಂದ ಜಾರಿಯಾಗಿದೆ. ಒಟ್ಟಾರೆಯಾಗಿ ಕ್ಯಾನ್ಸರ್ ನಿವಾರಕ 426 ಔಷಧಗಳ ಪೈಕಿ ಶೇ.91ರಷ್ಟುಅಂದರೆ 390 ಔಷಧಗಳ ದರ ಇಳಿಕೆ ಯಾಗಿದ್ದು, 22 ಲಕ್ಷ ಕ್ಯಾನ್ಸರ್ ರೋಗಿಗಳಿಗೆ ಇದರಿಂದ ಪ್ರಯೋಜನವಾಗಲಿದೆ. ಅಲ್ಲದೇ ವಾರ್ಷಿಕವಾಗಿ ಕ್ಯಾನ್ಸರ್ ರೋಗಿಗಳಿಗೆ 800 ಕೋಟಿ ರು. ಉಳಿತಾಯವಾಗಲಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 9, 2019, 9:17 AM IST