ಏಪ್ರಿಲ್ 14ಕ್ಕೆ ಗ್ರಾಹಕರಿಗಾಗಿ 1 ಕೋಟಿ ರೂಪಾಯಿಯ ಮೆಗಾ ಡ್ರಾ ಮತ್ತು ವ್ಯಾಪಾರಿಗಳಿಗಾಗಿ 50 ಲಕ್ಷ ರೂಪಾಯಿಯ ಮೆಗಾ ಡ್ರಾ ಸಹ ಇರಲಿದೆ. ಈ ಯೋಜನೆಗಳಿಗಾಗಿ ಸರ್ಕಾರ 340 ಕೋಟಿ ರೂಪಾಯಿಗಳನ್ನ ಮೀಸಲಿಟ್ಟಿದೆ.
ನವದೆಹಲಿ(ಡಿ.15): ಡಿಜಿಟಲ್ ಪೇಮೆಂಟ್ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರ 2 ಹೊಸ ಯೋಜನೆಗಳನ್ನ ಘೋಷಿಸಿದೆ. ಗ್ರಾಹಕರು ಮತ್ತು ವ್ಯಾಪಾರಿಗಳಿಗಾಗಿ ಲಕ್ಕಿ ಗ್ರಾಹಕ ಯೋಜನೆ ಮತ್ತು ಡಿಜಿ ಧನ್ ವ್ಯಾಪಾರಿ ಯೋಜನೆಯನ್ನ ಘೋಷಿಸಲಾಗಿದೆ.
ಲಕ್ಕಿ ಗ್ರಾಹಕ ಯೋಜನೆಯಲ್ಲಿ ಪ್ರತಿ ದಿನ 50 ರೂಪಾಯಿಯಿಂದ 3000 ರೂಪಾಯಿವರೆಗೆ ಡಿಜಿಟಲ್ ಪೇಮೆಂಟ್ ಮಾಡಿದ ಗ್ರಾಹಕರನ್ನ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ. ದಿನಕ್ಕೆ 1000 ರೂ. ಮತ್ತು ವಾರಕ್ಕೆ 50 ಲಕ್ಷ ರೂಪಾಯಿವರೆಗೆ ಬಹುಮಾನ ನೀಡಲಾಗುತ್ತೆ.
ಭಾರತೀಯರು ಸಾಂಪ್ರದಾಯಿಕ ವ್ಯವಹಾರದ ಪದ್ಧತಿಯನ್ನ ಬಿಟ್ಟು ಡಿಜಿಟಲ್ ಪೇಮೆಂಟ್`ಗೆ ಬದಲಾಗಲು ಪ್ರೋತ್ಸಾಹ ಯೋಜನೆಗಳನ್ನ ಜಾರಿಗೊಳಿಸುವುದಾಗಿ ಈ ಮೊದಲೇ ಸರ್ಕಾರ ಹೇಳಿತ್ತು. ಅದರಂತೆ ನೀತಿ ಆಯೋಗದ ಸಿಇಓ ಅಮಿತಾಬ್ ಕಾಂತ್ ಈ ಯೋಜನೆಗಳನ್ನ ಘೋಷಿಸಿದ್ದು, ಡಿಸೆಂಬರ್ 25ರಿಂದ ಜಾರಿಗೆ ಬರಲಿವೆ.
ಏಪ್ರಿಲ್ 14ಕ್ಕೆ ಗ್ರಾಹಕರಿಗಾಗಿ 1 ಕೋಟಿ ರೂಪಾಯಿಯ ಮೆಗಾ ಡ್ರಾ ಮತ್ತು ವ್ಯಾಪಾರಿಗಳಿಗಾಗಿ 50 ಲಕ್ಷ ರೂಪಾಯಿಯ ಮೆಗಾ ಡ್ರಾ ಸಹ ಇರಲಿದೆ. ಈ ಯೋಜನೆಗಳಿಗಾಗಿ ಸರ್ಕಾರ 340 ಕೋಟಿ ರೂಪಾಯಿಗಳನ್ನ ಮೀಸಲಿಟ್ಟಿದೆ.