ನವದೆಹಲಿ(ಅ.18): ಕೇಂದ್ರೀಯ ಭದ್ರತಾ ಪಡೆಗಳ ಕಚೇರಿಗಳಲ್ಲಿ ದೇಶದ ಮೊದಲ ಗೃಹ ಸಚಿವ ಹಾಗೂ ಉಪ ಪ್ರಧಾನಮಂತ್ರಿ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಭಾವಚಿತ್ರವನ್ನು ಅಳವಡಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

ಸರ್ದಾರ್‌ ಪಟೇಲರ ಬಾನೆತ್ತರದ ಮೂರ್ತಿ ಉದ್ಘಾಟನೆಗೆ ಸಿದ್ಧ! ಏನಿದರ ವಿಶೇಷ..?

ಪೊಲೀಸ್, ಕೇಂದ್ರೀಯ ಭದ್ರತಾ ಪಡೆಗಳ ಎಲ್ಲ ಕಚೇರಿಗಳಲ್ಲಿ ಸರ್ದಾರ್ ಭಾವಚಿತ್ರ ಕಡ್ಡಾಯ ಎಂದು ಸಚಿವಾಲಯದ ಆದೇಶ ಪ್ರತಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಭಾವಚಿತ್ರದ ಜೊತೆಗೆ ನಾವು ಎಂದಿಗೂ ಭಾರತದ ಭದ್ರತೆ, ಏಕತೆ ಹಾಗೂ ಸಮಗ್ರತೆಯನ್ನು ಕಾಪಾಡುತ್ತೇವೆ ಎಂಬ ಅಡಿಬರಹ ಕಡ್ಡಾಯ ಎಂದು ಆದೇಶ ನೀಡಲಾಗಿದೆ.

ಉಕ್ಕಿನ ಮನುಷ್ಯನಿಗೆ ಗೌರವಾರ್ಪಣೆ, ಏಕತಾ ಪ್ರತಿಮೆ ಲೋಕಾರ್ಪಣೆ

ಸರ್ದಾರ್ ಪಟೇಲ್ ದೇಶದ ಸಮಗ್ರತೆಗೆ ನೀಡಿರುವ ಕೊಡುಗೆ ಸ್ಮರಿಸಲು ಈ ಕ್ರಮ ಕೈಗೊಂಡಿರುವುದಾಗಿ ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ. ಈ ವರ್ಷ ಸರ್ದಾರ್ ಪಟೇಲರ ಜನ್ಮ ಜಯಂತಿಯಂದು ರಾಷ್ಟ್ರೀಯ ಏಕತಾ ದಿವಸ್ ಆಚರಣೆ ಮಾಡಲಾಗುತ್ತಿದ್ದು, ಅಂದಿನಿಂದಲೇ ಕೇಂದ್ರೀಯ ಭದ್ರತಾ ಪಡೆಗಳ ಕಚೇರಿಗಳಲ್ಲಿ ಸರ್ದಾರ್ ಪಟೇಲರ ಭಾವಚಿತ್ರ ಹಾಕುವಂತೆ ಆದೇಶ ನೀಡಿದೆ.