Kalaburgi Lok Sabha Constituency: ಮಾವ ಖರ್ಗೆ ಸೋಲಿಗೆ ಸೇಡು ತೀರಿಸಿಕೊಳ್ತಾರಾ ಅಳಿಯ ರಾಧಾಕೃಷ್ಣ?
ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡನಿ ಸ್ಪರ್ಧಿಸಿರುವ ಕಲಬುರಗಿ (ಮೀಸಲು) ಲೋಕಸಭಾ ಕ್ಷೇತ್ರ, ಹೈವೋಲೇಜ್ ಕದನ ಕಣವಾಗಿ ಮಾರ್ಪಟ್ಟಿದೆ.
• ಶೇಷಮೂರ್ತಿ ಅವಧಾನಿ
ಕಲಬುರಗಿ (ಮೇ.03): ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡನಿ ಸ್ಪರ್ಧಿಸಿರುವ ಕಲಬುರಗಿ (ಮೀಸಲು) ಲೋಕಸಭಾ ಕ್ಷೇತ್ರ, ಹೈವೋಲೇಜ್ ಕದನ ಕಣವಾಗಿ ಮಾರ್ಪಟ್ಟಿದೆ. ಖರ್ಗೆಯವರಿಗೆ ತಮ್ಮ ತವರು ಕ್ಷೇತ್ರದಲ್ಲಿ ಪಕ್ಷದ ಪ್ರಾಬಲ್ಯವನ್ನು ಉಳಿಸಿ ಕೊಳ್ಳುವುದು ಅನಿವಾರ್ಯ ವಾಗಿದ್ದರೆ, ಬಿಜೆಪಿಗೆ ಕ್ಷೇತ್ರ ವನ್ನು ಉಳಿಸಿಕೊಳ್ಳುವುದು ಪ್ರತಿಷ್ಠೆಯ ವಿಷಯವಾಗಿದೆ. ಒಟ್ಟು 14 ಮಂದಿ ಕಣದಲ್ಲಿದ್ದರೂ, ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆಯೇ ನೇರ ಸ್ಪರ್ಧೆಯಿದೆ.2019ರಲೋಕಸಮರದಲ್ಲಿ ಸೋಲು ಕಂಡ ಡಾ. ಮಲ್ಲಿಕಾರ್ಜುನ ಖರ್ಗೆ ಈ ಬಾರಿ ತಮ್ಮ ಅಳಿಯ (ಖರ್ಗೆಯವರ ಪತ್ನಿ ರಾಧಾಬಾಯಿ ಸಹೋದರ, ಪುತ್ರಿ ಡಾ. ಗಾಯತ್ರಿ ಪತಿ), ಉದ್ಯಮಿ ರಾಧಾಕೃಷ್ಣ ದೊಡ್ಮನಿ ಅವರನ್ನು ಕಣಕ್ಕಿಳಿಸುವ ಮೂಲಕ ಕಲಬುರಗಿ ಕೋಟೆಯನ್ನು ಮರಳಿ ಕೈವಶ ಮಾಡಿಕೊಳ್ಳಲು ರಣತಂತ್ರ ರೂಪಿಸಿದ್ದಾರೆ.
ಬಿಜೆಪಿಯಿಂದ ಹಾಲಿ ಸಂಸದ ಉಮೇಶ ಜಾಧವ್ ಪುನರಾಯ್ಕೆ ಬಯಸಿದ್ದಾರೆ. ಖರ್ಗೆ ಇದೀಗ ಎಐಸಿಸಿ ಅಧ್ಯಕ್ಷರು. ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ, ಇಂಡಿಯಾ ಒಕ್ಕೂಟ ಬಿಂಬಿತ ಪ್ರಧಾನಿ ಅಭ್ಯರ್ಥಿ. ಇವೆಲ್ಲ ಕಾರಣಗಳಿಂದಾಗಿ ಪ್ರಧಾನಿ ಮೋದಿ ಕೂಡಾ ಕಲಬುರಗಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಈ ಬಾರಿಯ ಲೋಕ ಸಮ ರದ ರಣಕಹಳೆ ಮೊಳಗಿಸಲು ಮೋದಿ ಆಯ್ಕೆಮಾಡಿಕೊಂ ಡಿದ್ದೇ ಕಲಬುರಗಿಯನ್ನು, ಜಿದ್ದಾಜಿದ್ದಿ ಕಣದಲ್ಲಿ ಕಾಂಗ್ರೆಸ್ಸಿನ ರಾಧಾಕೃಷ್ಣ, ಬಿಜೆಪಿಯ ಡಾ. ಜಾಧವ್ ಹೆಸರಿಗೆ ಮಾತ್ರ ಹುರಿಯಾಳುಗಳು, ಕಲಬುರಗಿ ಅಖಾಡದಲ್ಲಿ ಪ್ರಧಾನಿ ಮೋದಿ ಎಐಸಿಸಿ ಅಧ್ಯಕ್ಷ ಖರ್ಗೆ ನಡುವೆಯೇ ಹಣಾ ಹಣಿ ಎಂದು ಜನ ಹೇಳುತ್ತಿದ್ದಾರೆ. 8 ಬಾರಿ ಗುರುಮಠಕಲ್, 1 ಬಾರಿ ಚಿತ್ತಾಪುರ ಸೇರಿ 9 ಬಾರಿ ಅಸೆಂಬ್ಲಿ 2 ಬಾರಿ ಪಾರ್ಲಿಮೆಂಟ್ ಹೀಗೆ 11 ಬಾರಿ ಚುನಾವಣೆಯಲ್ಲಿ ಗೆಲ್ಲುತ್ತ ಡಾ.ಖರ್ಗೆ ಸೋಲಿಲ್ಲದ ಸರದಾರರಾಗಿದ್ದರು.
ಪೆನ್‌ಡ್ರೈವ್ ವಿಚಾರ ಡಿಸಿಎಂ ಡಿಕೆಶಿ ಯಾಕೆ ಮುಚ್ಚಿಟ್ಟರು?: ವಿಜಯೇಂದ್ರ
ಆದರೆ, 2019ರಲ್ಲಿ ಖರ್ಗೆಯವರಿಗೆ ಇಲ್ಲಿ ಸೋಲಾಯಿತಲ್ಲದೆ, ಕಾಂಗ್ರೆಸ್‌ನ ಭದ್ರಕೋಟೆ ಕಮಲ ಪಡೆಯ ವಶವಾಯ್ತು. 5 ದಶಕಗಳ ಸುದೀರ್ಘ ರಾಜಕೀಯ ಜೀವ ನದಲ್ಲೇ ಖರ್ಗೆಗೆ ಅದು ಮೊದಲ ಸೋಲು. ಖರ್ಗೆಯವರ ಸೋಲಿಲ್ಲದ ಸರದಾರನೆಂಬ ಬಿರುದು ಮುಕ್ಕಾಗಿಸಿತ್ತು. ಈ ಸೋಲು ಖರ್ಗೆ ಯವರನ್ನು ತೀವ್ರ ಘಾಸಿಗೊಳಿಸಿತು. ಹೀಗಾಗಿ, 2024ರ ಕದನ ಕಣದಿಂದ ದೂರ ಉಳಿದು ತಮ್ಮ ಸೋಲಿನ ಸೇಡು ತೀರಿಸಿಕೊಳ್ಳಲು ಖರ್ಗೆಯವರು ಅಳಿಯನನ್ನೇ ಅಖಾಡಕ್ಕಿಳಿಸಿ ಜನರ ಬೆಂಬಲ ಕೋರುತ್ತಿದ್ದಾರೆ. 2019ರಲ್ಲಿ ಡಾ.ಖರ್ಗೆ ಅವರನ್ನು ಸೋಲಿಸಿದ ಬಿಜೆಪಿ ಹಾಲಿ ಸಂಸದ ಉಮೇಶ್ ಜಾಧವ್ ಪುನರಾಯ್ಕೆ ಬಯಸಿ ಅಖಾಡದಲ್ಲಿದ್ದಾರೆ. ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳನ್ನೇ ಪಟ್ಟಿ ಮಾಡುತ್ತಿದ್ದಾರೆ. ಗುರುಮಠಕಲ್‌ನಲ್ಲಿ ಜೆಡಿಎಸ್ ಶಾಸಕರೇ ಇದ್ದು, ಜೆಡಿಎಸ್ ಮೈತ್ರಿ ಯಿಂದ ಲಾಭವಾಗಬಹುದು ಎಂಬ ಆಶಾವಾ ದದಲ್ಲಿ ಇದ್ದಾರೆ.
ಜಾತಿ-ಮತ ಲೆಕ್ಕಾಚಾರ: ಲಿಂಗಾಯಿತ, ದಲಿತ, ಬಂಜಾರಾ, ಕೋಲಿ ಮತದಾರರೇ ಅಧಿಕ ವಾಗಿರುವ ಕಲಬುರಗಿ ಮೀಸಲು ಕ್ಷೇತ್ರದಲ್ಲಿ ಲಿಂಗಾಯಿತರು ಹಾಗೂ ಅಹಿಂದ ವರ್ಗದ ಮತದಾರರೇ ನಿರ್ಣಾಯಕ, ಕುರುಬ, ಮುಸ್ಲಿಂ ಗಮನಾರ್ಹವಾಗಿರೋದರಿಂದ ಕಡೆಗಣಿಸುವಂತಿಲ್ಲ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 2 ಮೀಸಲು ಕ್ಷೇತ್ರಗಳಾಗಿವೆ. ಇನ್ನುಳಿದಂತೆ ಕಲಬುರಗಿ ದಕ್ಷಿಣದಲ್ಲಿ ಬ್ರಾಹ್ಮಣರು, ಜೇವರ್ಗಿ, ಸೇಡಂನಲ್ಲಿ ಲಿಂಗಾಯಿತರು (ಗಾಣಿಗ, ರೆಡ್ಡಿ) ಅಧಿಕವಾಗಿದ್ದಾರೆ.
ಡಾ.ಉಮೇಶ ಜಾಧವ್, ಬಿಜೆಪಿ ಅಭ್ಯರ್ಥಿ: ಬಿಜೆಪಿಯಿಂದ 2019ರಲ್ಲಿ ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ಗೆಲವು ಸಾಧಿಸಿದ್ದ ಉಮೇಶ ಜಾಧವ್, ಪುನರಾಯ್ಕೆ ಬಯಸಿ ಕಣದಲ್ಲಿದ್ದಾರೆ. ಇದಕ್ಕೂ ಮುನ್ನ ಚಿಂಚೋಳಿ (ಮೀಸಲು) ವಿಧಾನಸಭೆ ಕ್ಷೇತ್ರದಿಂದ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಂಜಾರಾ ಸಮುದಾಯಕ್ಕೆ ಸೇರಿದ್ದಾರೆ. ಒಂದು ಬಾರಿ ಸಂಸದರಾಗಿದ್ದ ಡಾ. ಜಾಧವ್ ಅವರಿಗೆ ಕೇಂದ್ರದ ಹಲವು ಸಮಿತಿಗಳಲ್ಲಿದ್ದು ಕೆಲಸ ಮಾಡಿದ ಅನುಭವವಿದೆ. ನರೇಂದ್ರ ಮೋದಿ ಅವರ ಅಭಿವೃದ್ಧಿ ಕೆಲಸಗಳ ಮೇಲೆ ಈ ಬಾರಿ ಮತ ಕೇಳುತ್ತಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಜಾತಿ ಜನಗಣತಿ: ರಾಹುಲ್ ಗಾಂಧಿ
ರಾಧಾಕೃಷ್ಣ ದೊಡ್ಮನಿ, ಕಾಂಗ್ರೆಸ್ ಅಭ್ಯರ್ಥಿ: ಎಐಸಿಸಿ ಅಧ್ಯಕ್ಷಡಾ. ಮಲ್ಲಿಕಾರ್ಜುನ ಖರ್ಗೆಯವರ ಅಳಿಯ ರಾಧಾಕೃಷ್ಣ ದೊಡ್ಮನಿಗೆ ರಾಜಕಾರಣ ಹೊಸತೇ ನಲ್ಲ. ಖರ್ಗೆಯವರ 5 ದಶಕಗಳ ರಾಜಕೀಯ ಬದುಕಲ್ಲಿ ತೆರೆಮರೆಯ ಲ್ಲಿದೇ ಕೆಲಸ ಮಾಡಿ ದವರು, ಈ ಬಾರಿ ಚುನಾವಣಾ ರಾಜಕೀಯದಲ್ಲಿ ನೇರ ಎಂಟ್ರಿ ಕೊಟ್ಟಿದ್ದಾರೆ, ಉದ್ಯಮಿಯಾಗಿರುವ ಇವರು ಖರ್ಗೆಯವರ ಪತ್ನಿ ರಾಧಾಬಾಯಿ ಸಹೋದರ, ಖರ್ಗೆಯವರ ಹಿರಿಯ ಮಗಳು ಡಾ. ಗಾಯತ್ರಿ ಅವರ ಪತಿ, ಕಲಬುರಗಿ, ಬೆಂಗಳೂರು, ತುಮಕೂರು ಸೇರಿ ಹಲವೆಡೆ ಶಿಕ್ಷಣ ಸಂಸ್ಥೆ ಮುನ್ನಡೆಸುತ್ತಿದ್ದಾರೆ.