ಬ್ಯಾಂಕ್​​ಗಳಲ್ಲಿ ಹೆಚ್ಚು ಹೆಚ್ಚು ನಗದು ತೆಗೆದುಕೊಳ್ಳುವುದನ್ನು ತಪ್ಪಿಸಿ, ಆನ್​ಲೈನ್ ಪಾವತಿ ಹೆಚ್ಚಿಸಲು ಕೇಂದ್ರ ಈ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ನವದೆಹಲಿ(ಜ.13): ಬ್ಯಾಂಕ್​ನಿಂದ ಡ್ರಾ ಮಾಡಿಕೊಳ್ಳುವ ನಗದು ಹಣಕ್ಕೆ ಕ್ಯಾಶ್ ಟ್ಯಾಕ್ಸ್ ಬೀಳುತ್ತಾ..? ಇಂತಹದ್ದೊಂದು ಚಿಂತನೆ ಈಗ ಸರ್ಕಾರದ ಅಂಗಳದಲ್ಲಿ ಸರಿದಾಡ್ತಾ ಇದೆ. ಡಿಜಿಟಲ್ ಪೇಮೆಂಟ್ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಂಥದ್ದೊಂದು ಕ್ರಮ ಜಾರಿಗೊಳಿಸಲು ಚಿಂತನೆ ನಡೆಸಿದೆ. ಬ್ಯಾಂಕ್​​ಗಳಲ್ಲಿ ಹೆಚ್ಚು ಹೆಚ್ಚು ನಗದು ತೆಗೆದುಕೊಳ್ಳುವುದನ್ನು ತಪ್ಪಿಸಿ, ಆನ್​ಲೈನ್ ಪಾವತಿ ಹೆಚ್ಚಿಸಲು ಕೇಂದ್ರ ಈ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸದ್ಯಕ್ಕೆ ಈ ಚಿಂತನೆ ಇನ್ನೂ ಪ್ರಸ್ತಾವನೆ ಸ್ವರೂಪದಲ್ಲೇ ಇದೆ. ಆದರೆ, ಇದೇನಾದರೂ ಜಾರಿಗೆ ಬಂದರೆ, ಎಟಿಎಂ, ಬ್ಯಾಂಕ್​ನಿಂದ ಪಡೆಯುವ ನಗದು ಹಣಕ್ಕೆ ತೆರಿಗೆ ಪಾವತಿ ಮಾಡಬೇಕಾಗುತ್ತೆ. ಒಂದು ಹಂತದ ಮಿತಿಯನ್ನು ನಿಗದಿ ಮಾಡಿ, ಮೇಲ್ಪಟ್ಟ ನಗದು ಡ್ರಾಗೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred