ಉಡ್ತಾ ಪಂಜಾಬ್, ಲಿಫ್ಟಿಕ್ ಅಂಡರ್ ಮೈ ಬುರ್ಖಾ ಮುಂತಾದ ಚಿತ್ರಗಳ ಬಿಡುಗಡೆ ಸಂದರ್ಭದಲ್ಲಿ ಸೆನ್ಸಾರ್ ಮಂಡಳಿ ಅಧ್ಯಕ್ಷರಾದ ಪಹ್ಲಾಜ್ ನಿಹಲಾನಿ ಹಲವು ಬಾರಿ ವಿವಾದಗಳಿಗೆ ಗುರಿಯಾಗಿದ್ದರು.

ಮುಂಬೈ(ಜು.25): ಅಧಿಕಾರಕ್ಕೆ ಬಂದ ದಿನದಿಂದಲೂ ವಿವಾದಾತ್ಮಕ ನಿರ್ಧಾರದಿಂದಲೇ ಸುದ್ದಿಯಲ್ಲಿರುವ ಕೇಂದ್ರ ಸೆನ್ಸಾರ್ ಮಂಡಳಿಯ ಅಧ್ಯಕ್ಷ ಪಹ್ಲಾಜ್ ನಿಹಲಾನಿಗೆ ಗೇಟ್‌'ಪಾಸ್ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಜು.28ರಂದು ತಿರುವನಂತಪುರದಲ್ಲಿ ಸೆನ್ಸಾರ್ ಮಂಡಳಿ ಸದಸ್ಯರ ಸಭೆ ನಡೆಯಲಿದೆ. ಈ ವೇಳೆ ನಿಹಲಾನಿ ಅವರ ಸ್ಥಾನಕ್ಕೆ ಬೇರೊಬ್ಬರನ್ನು ನೇಮಕ ಮಾಡಲಾಗುವುದು ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿಹಲಾನಿ ಅವರಿಂದ ತೆರವಾಗಲಿರುವ ಸ್ಥಾನಕ್ಕೆ ಪ್ರಕಾಶ್ ಝಾ, ಕಿರುತರೆ ನಟ ಚಂದ್ರಶೇಖರ್ ದ್ವಿವೇದಿ ಅಥವಾ ಮಧು ಬಂಡಾರ್ಕರ್ ಅವರ ಹೆಸರುಗಳು ಕೇಳಿಬರುತ್ತಿವೆ. ಆದರೆ ಸರ್ಕಾರದಿಂದ ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಉಡ್ತಾ ಪಂಜಾಬ್, ಲಿಫ್ಟಿಕ್ ಅಂಡರ್ ಮೈ ಬುರ್ಖಾ ಮುಂತಾದ ಚಿತ್ರಗಳ ಬಿಡುಗಡೆ ಸಂದರ್ಭದಲ್ಲಿ ಸೆನ್ಸಾರ್ ಮಂಡಳಿ ಅಧ್ಯಕ್ಷರಾದ ಪಹ್ಲಾಜ್ ನಿಹಲಾನಿ ಹಲವು ಬಾರಿ ವಿವಾದಗಳಿಗೆ ಗುರಿಯಾಗಿದ್ದರು.