Asianet Suvarna News Asianet Suvarna News

ಈ ಗ್ರಾಮದಲ್ಲಿ 1 ಮೂಟೆ ಸಿಮೆಂಟ್ ದರ 8 ಸಾವಿರ ರುಪಾಯಿಗಳು..!

50 ಕೆಜಿ ಭಾರ ಹೊತ್ತು ಕೊರೆಯುವ ಚಳಿಯಲ್ಲಿ ಮತ್ತು ದುರ್ಗಮ ಪ್ರದೇಶದಲ್ಲಿ 156 ಕಿ.ಮೀ ಕ್ರಮಿಸುವುದು ನಿಜಕ್ಕೂ ಸವಾಲಿನ ಕೆಲಸವೇ ಆಗಿದೆ. ಈ ಹಿನ್ನೆಲೆಯಲ್ಲಿ ಒಂದು ಸಿಮೆಂಟ್ ಮೂಟೆಗೆ ಅಷ್ಟು ದರ ವಿಧಿಸಲಾಗುತ್ತಿದೆ ಎನ್ನಲಾಗಿದೆ.

Cement Bag Costs Rs 8000 at this Border town in Arunachal

ಇಟಾನಗರ(ನ.19): ಸಿಮೆಂಟ್ ಬೆಲೆ ಹೆಚ್ಚು ಎಂದರೆ ಎಷ್ಟಿದ್ದೀತು. 1000 ಅಥವಾ 2000 ಎಂದುಕೊಂಡರೆ, ಖಂಡಿತಾ ಅದು ತಪ್ಪು. ಅರುಣಾಚಲ ಪ್ರದೇಶದ ಗ್ರಾಮವೊಂದರ ಜನ 50 ಕೆಜಿಯ ಒಂದು ಮೂಟೆ ಸಿಮೆಂಟ್‌'ಗೆ ಬರೋಬ್ಬರಿ 8 ಸಾವಿರ ರು. ಬೆಲೆ ತೆರುತ್ತಿದ್ದಾರೆ.

ಹಾಗಂತ ಅಲ್ಲಿ ಸಿಮೆಂಟ್ ಅಭಾವವೇನು ಉದ್ಭವಿಸಿಲ್ಲ. ಸಿಮೆಂಟ್‌ಗೆ ಇಷ್ಟೊಂದು ದುಬಾರಿ ದರ ವಿಧಿಸಲು ಕಾರಣ, ಚೀನಾ ಗಡಿಯಲ್ಲಿ ಇರುವ ಚಾಂಗ್ಲಾಂಗ್ ಜಿಲ್ಲೆಯ ವಿಜೋಯ್ ನಗರ ಎಂಬ ಈ ಗ್ರಾಮಕ್ಕೆ ಯಾವುದೇ ವಸ್ತು ತರಬೇಕಾದರೂ ಅದನ್ನು 156 ಕಿ.ಮೀ ಹಾದಿಯಲ್ಲಿ ನಡೆದುಕೊಂಡೇ ಹೊತ್ತು ತರಬೇಕು. ಹೀಗಾಗಿ ಈ ಊರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಕೆಲಸ ಮಾಡುವ ಚಕ್ಮಾ ಜನಾಂಗ ಪ್ರತಿ 1 ಸಿಮೆಂಟ್ ಮೂಟೆ ಸಾಗಿಸಲು 8 ಸಾವಿರ ರು. ದರ ವಿಧಿಸುತ್ತಿದೆ.

50 ಕೆಜಿ ಭಾರ ಹೊತ್ತು ಕೊರೆಯುವ ಚಳಿಯಲ್ಲಿ ಮತ್ತು ದುರ್ಗಮ ಪ್ರದೇಶದಲ್ಲಿ 156 ಕಿ.ಮೀ ಕ್ರಮಿಸುವುದು ನಿಜಕ್ಕೂ ಸವಾಲಿನ ಕೆಲಸವೇ ಆಗಿದೆ. ಈ ಹಿನ್ನೆಲೆಯಲ್ಲಿ ಒಂದು ಸಿಮೆಂಟ್ ಮೂಟೆಗೆ ಅಷ್ಟು ದರ ವಿಧಿಸಲಾಗುತ್ತಿದೆ ಎನ್ನಲಾಗಿದೆ.

Follow Us:
Download App:
  • android
  • ios