ಆದರೆ ಕೆಲ ನಟಿಯರು ಸಣ್ಣ ವಯಸ್ಸಿಗೆ ಮದುವೆಯಾಗಿಬಿಡ್ತಾರೆ. ಅದ್ರಲ್ಲೂ ತುಂಬಾ ಹೆಸರು ಮಾಡಿದ ನಟೀ ಮಣಿಯರಂತೂ ಕಡಿಮೆ ವಯಸ್ಸಿಗೆ ಮದುವೆಯಾಗಿರೊ ಉದಾಹರಣೆಗಳಿವೆ.

ಸಿನಿಮಾ ಕ್ಷೇತ್ರಕ್ಕೆ ನಟನಟಿಯರು ಮದುವೆಯಾಗೋದು 30-35ರ ನಂತರವೇ. ನಟಿಯರಂತೂ ಬೇಗ ಮದುವೆಯಾದರೆ ಎಲ್ಲಿ ತಮ್ಮ ಗ್ಲಾಮರ್ ಕಡಿಮೆಯಾಗುತ್ತದೊ ಎಂಬ ಚಿಂತೆಯಲ್ಲಿರುತ್ತಾರೆ.ಆದರೆ ಕೆಲ ನಟಿಯರು ಸಣ್ಣ ವಯಸ್ಸಿಗೆ ಮದುವೆಯಾಗಿಬಿಡ್ತಾರೆ. ಅದ್ರಲ್ಲೂ ತುಂಬಾ ಹೆಸರು ಮಾಡಿದ ನಟೀ ಮಣಿಯರಂತೂ ಕಡಿಮೆ ವಯಸ್ಸಿಗೆ ಮದುವೆಯಾಗಿರೊ ಉದಾಹರಣೆಗಳಿವೆ.

ಜೆನಿಲಿಯಾ: ಈ ನಟಿಮಣಿ ಮದುವೆಯಾದಾಗ ಅವರ ವಯಸ್ಸು 20 ಪ್ಲಸ್ ಅಗಿತ್ತು. ಸಿನಿಮಾ ರಂಗದಲ್ಲಿ ಉದಯೋನ್ಮುಖ ನಟಿಯಾಗಿ ಗುರುತಿಸಿಕೊಳ್ಳುತ್ತಿರುವಾಗಲೇ ರಿತೇಶ್ ಕೈ ಹಿಡಿದು ಕೈಗೆ ಮಗುವನ್ನೂ ಕೊಟ್ಟು ಬಿಟ್ರು. 

ಟ್ವಿಂಕಲ್ಖನ್ನಾ: ಅಕ್ಷಯ್ ಕುಮಾರ್ ಅವರನ್ನ ಟ್ವಿಂಕಲ್ ಮದುವೆಯಾಗೋವಾಗ ಇನ್ನೂ 26 ವಯಸ್ಸಾಗಿತ್ತು. ಸಿನಿಮಾಗಳಲ್ಲಿ ಬಹಳಷ್ಟು ಒಳ್ಳೆಯ ಅವಕಾಶಗಳಿದ್ರೂ ಟ್ವಿಂಕಲ್ ಅಕ್ಕಿ ಜೊತೆ ಮದುವೆಯಾಗಿ ಮನೇಲಿ ಸೆಟಲ್ ಆಗ್ಬಿಟ್ರು.

ಬಹಳ ಸಣ್ಣವಯಸ್ಸಿಗೆ ಮದುವೆಯಾದ ನಟಿಯರಲ್ಲಿ ದಿವ್ಯ ಭಾರತಿ,ಭಾಗ್ಯಶ್ರೀ, ಚಿತ್ರಾಂಗದಾ ಸಿಂಗ್ ಸಹ ಸೇರದ್ಧಾರೆ. ಎಲ್ಲರೂ 18 20ರ ಆಸುಪಾಸಿನಲ್ಲೆ ಮದುವೆಯಾದವರು.

ಸ್ಯಾಂಡಲ್'ವುಡ್'ನಲ್ಲೂ ಇದ್ದಾರೆ

ಕನ್ನಡದಲ್ಲಿ ಹಾಗೇ ನೋಡೊದಾದ್ರೆ ಸ್ಪರ್ಷ ರೇಖಾ ಆಗಷ್ಟೆ ಪದವಿ ಮುಗಿಸಿ ಸ್ಪರ್ಷ ಮತ್ತು ಮೆಜೆಸ್ಟಿಕ್ ಸಿನಿಮಾಗಳಲ್ಲಿ ಅಭೀನಯಿಸಿದ್ರಷ್ಟೆ. ಆಗ್ಲೇ ಮದುವೆ ಮಾಡಿಬಿಟ್ರು. ನಟಿ ರಾಧಿಕ ಕೂಡ ಮದುವೆ, ಬ್ರೇಕಪ್ ನಂತರವೇ ಸಿನಿಮ ರಂಗಕ್ಕೆ ಬಂದಿದ್ದು. ಒಟ್ನಲ್ಲಿ ಪ್ರೀತಿಯ ಕಾರಣವೋ ಮನೆಯವರ ಓಲೈಕೆಯ ಬೇಡಿಕೆಯೋ ಬಹಳ ಕಡಿಮೆ ವಯಸ್ಸಿನಲ್ಲೂ ಕೆಲ ನಟಿಯರು ಮದುವೆಯಾಗಿದ್ದಂತೂ ನಿಜ.