ಗೋವಿಂದಾಯ ನಮಃ ಸಿನಿಮಾ ಖ್ಯಾತಿಯ ಪಾರೂಲ್ ಯಾದವ್  ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು  ಹಳೆಯ ಸುದ್ದಿ. ಇದೀಗ ಆ ದಾಳಿಯ ದೃಶ್ಯಾವಳಿ ಸುವರ್ಣನ್ಯೂಸ್​ಗೆ ಲಭಿಸಿದೆ.

ಮುಂಬೈ(ಜ.30): ಗೋವಿಂದಾಯ ನಮಃ ಸಿನಿಮಾ ಖ್ಯಾತಿಯ ಪಾರೂಲ್ ಯಾದವ್ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು ಹಳೆಯ ಸುದ್ದಿ. ಇದೀಗ ಆ ದಾಳಿಯ ದೃಶ್ಯಾವಳಿ ಸುವರ್ಣನ್ಯೂಸ್​ಗೆ ಲಭಿಸಿದೆ.

ದಿನಾಂಕ: 23-1-2016, ಸಮಯ: ಸಂಜೆ 5.30, ಸ್ಥಳ : ಜೋಗೇಶ್ವರಿ ರಸ್ತೆ, ಮುಂಬೈ

ಸರಿಯಾಗಿ ಒಂದು ವಾರದ ಹಿಂದೆ ನಟಿ ಪಾರೂಲ್​ ಯಾದವ್​ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದವು. ಮುಂಬೈನ ಜೋಗೇಶ್ವರಿ ಅಪಾರ್ಟ್​'ಮೆಂಟ್​ ಬಳಿ ತಮ್ಮ ಸಾಕು ನಾಯಿಯೊಂದಿಗೆ ವಾಕಿಂಗ್​'ಗೆ ಹೋಗುವಾಗ ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿದ ಪಾರೂಲ್​'ಳ ಕಾಲು, ಕೈ ಹಾಗೂ ತಲೆ ಭಾಗಕ್ಕೆ ಕಚ್ಚಿತ್ತು.

ಕೂಡಲೇ ಪಾರೂಲ್​'ಳನ್ನು ಮುಂಬೈನ ಕೋಕಿಲಾ ಬೇನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದು ಒಂದು ವಾರದ ಬಳಿಕ ಸುವರ್ಣನ್ಯೂಸ್'​ಗೆ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭಿಸಿವೆ. ಜನವರಿ 23ರ ಸಂಜೆ 5.30ರ ಸುಮಾರಿಗೆ ತಮ್ಮ ನಾಯಿ ಜೊತೆ ವಾಕ್​ ಮಾಡುತ್ತಿದ್ದ ಪಾರೂಲ್​ ಕಡೆ ಮೂರ್ನಾಲ್ಕು ಬೀದಿ ನಾಯಿಗಳು ನುಗ್ಗಿ ಏಕಾಏಕಿ ದಾಳಿ ನಡೆಸಿವೆ.

ನಾಯಿಯೊಂದಿಗೆ ನೆಲಕ್ಕೆ ಬಿದ್ದ ಪಾರೂಲ್​ ಮೇಲೆ ನಾಯಿಗಳು ದಾಳಿ ನಡೆಸಿವೆ. ಕೂಡಲೇ ಅಪಾರ್ಟ್​ಮೆಂಟ್​ ನಿವಾಸಿಗಳು ನಾಯಿಗಳನ್ನು ಓಡಿಬಂದು ನಾಯಿಗಳನ್ನು ಓಡಿಸಿದ್ದಾರೆ. ಈ ಎಲ್ಲಾ ಘಟನೆಗಳು ಅಪಾರ್ಟ್​ಮೆಂಟ್​ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.