Asianet Suvarna News Asianet Suvarna News

ಎಲ್ಲಾ ಎತ್ಕೊಂಡ್ ಸ್ಟೇಷನ್ ಗೆ ಬನ್ನಿ: ಆಯುಧ ಪೂಜೆ ಮಾಡಿದ್ದ ಮುತ್ತಪ್ಪ ರೈಗೆ ಸಂಕಷ್ಟ!

ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪರೈಗೆ ಆಯುಧ ಪೂಜೆ ಸಂಕಷ್ಟ ತಂದೊಡ್ಡಿದೆ.

CCB police issued notice to Muttappa Rai
Author
Bengaluru, First Published Oct 19, 2018, 9:07 PM IST
  • Facebook
  • Twitter
  • Whatsapp

ಬೆಂಗಳೂರು, [ಅ.19]:  ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ  ಮುತ್ತಪ್ಪ ರೈಗೆ ಬೆಂಗಳೂರು ನಗರ ಪೊಲೀಸ್ [ಸಿಸಿಬಿ] ನೋಟಿಸ್ ನೀಡಿದೆ.

ತಮ್ಮ ಬಳಿ ಇರುವ ಎಲ್ಲಾ ಶಸ್ತ್ರಾಸ್ತ್ರಗಳು ಜೊತೆಗೆ ಅವುಗಳಿಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳ ಸಮೇತ 24 ಗಂಟೆಯೊಳೆಗೆ ಹಾಜರಾಗಬೇಕೆಂದು ಸಿಸಿಬಿ ಡಿಸಿಪಿ ಗಿರೀಶ್ ಅವರು ನೋಟಿಸ್ ನಲ್ಲಿ ಸೂಚಿಸಿದ್ದಾರೆ. 

ಮುತ್ತಪ್ಪ ರೈ ಆಯುಧ ಪೂಜೆ ಮಾಡಿದ್ದು ಹೀಗೆ..!

ಮುತ್ತಪ್ಪ ರೈ ಕುಟುಂಬ ನಿನ್ನೆ [ಗುರುವಾರ] ಆಯುಧ ಪೂಜೆ ವೇಳೆ ಗನ್ ಹಾಗೂ ಮಾರಾಕಾಸ್ತ್ರಗಳಿಗೆ ಪೂಜೆ ಸಲ್ಲಿಸಿದ್ದರು. ಆ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಡಿಸಿಪಿ ಗಿರೀಶ್ ಅವರು ನೋಟಿಸ್ ನೀಡಿದ್ದಾರೆ.

4 ರಿವಾಲ್ವರ್, 3 ಗನ್, 1 ಡ್ರ್ಯಾಗರ್​ಗೆ ಮಾಡಿದ್ದ ಪೂಜೆಯೇ ಇದೀಗ ಮುತ್ತಪ್ಪ ರೈಗೆ ಸಂಕಷ್ಟ ತಂದೊಡ್ಡಿದೆ.

Follow Us:
Download App:
  • android
  • ios