ಅಂಬಿಡೆಂಟ್​ ಕಂಪನಿ ವಂಚನೆ ಪ್ರಕರಣದಲ್ಲಿ ರೆಡ್ಡಿ ವಿರುದ್ದ ಯಾವುದೇ ದೂರು ದಾಖಲಾಗಿಲ್ಲ. ಆದರೂ ರೆಡ್ಡಿಯನ್ನ ಬಂಧಿಸಿದ್ದಾರೆ. ಯಾವ ಆಧಾರದ ಮೇಲೆ? ಅಷ್ಟಕ್ಕೂ ರೆಡ್ಡಿ ಮೇಲೆ ಸಿಸಿಬಿ ದಾಖಲಿಸಿರುವ ಕೇಸ್ ಗಳಾವುವು? ಇಲ್ಲಿದೆ ಡಿಟೇಲ್ಸ್

ಬೆಂಗಳೂರು, [ನ.11]: ಅಂಬಿಡೆಂಟ್​ ಕಂಪನಿ ವಂಚನೆ ಪ್ರಕರಣ ಸಂಬಂಧ 23 ಗಂಟೆಗಳ ವಿಚಾರಣೆ ಬಳಿಕ ಜನಾರ್ದನ ರೆಡ್ಡಿಯನ್ನ ಸಿಸಿಬಿ ಅರೆಸ್ಟ್ ಮಾಡಿದೆ.

ರೆಡ್ಡಿ ಎಳೆದೊಯ್ದ ಸಿಸಿಬಿ: ಎಷ್ಟು ದಿನ ಎಣಿಸಲಿದ್ದಾರೆ ಕಂಬಿ?

ಆದರೆ, ಅಂಬಿಡೆಂಟ್​ ಕಂಪನಿ ವಂಚನೆ ಪ್ರಕರಣದಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಆದರೂ ರೆಡ್ಡಿಯನ್ನ ಬಂಧಿಸಿದ್ದಾರೆ. ಯಾವ ಆಧಾರದ ಮೇಲೆ ರೆಡ್ಡಿಯನ್ನ ಬಂಧಿಸಲಾಗಿದೆ ಎನ್ನುವ ಡಿಟೇಲ್ಸ್ ಇಲ್ಲಿದೆ.

ಅಕ್ರಮ ಹಣ ಸಂಗ್ರಹ ನಿಷೇಧ ಕಾಯಿದೆಯಡಿ ರೆಡ್ಡಿ ಅವರನ್ನ ಬಂಧಿಸಲಾಗಿದೆ ಎಂದು ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಇನ್ನು ರೆಡ್ಡಿ ಅವರ ವಿರುದ್ಧ ದಾಖಲಿಸಿರುವ ಕೇಸ್​ಗಳನ್ನ ನೋಡುವುದಾದರೆ, ಮೂರು ಕೇಸ್ ಗಳನ್ನ ಹಾಕಿದ್ದಾರೆ.

* ಕೇಸ್​ 1- 120( B) ಅಪರಾಧ, ಸಂಚು
* ಕೇಸ್​ 2- 420 ವಂಚನೆ, ನಂಬಿಕೆ ದ್ರೋಹ
* ಕೇಸ್ 3- 201- ಸಾಕ್ಷ್ಯ ನಾಶ ಮಾಡಿರುವ ಆರೋಪ .