ಸಾರ್ವಜನಿಕ ಸ್ಥಳಗಳು, ಜನಸಂದಣಿ ಇರುವ ಖಾಸಗಿ ಸ್ಥಳಗಳಲ್ಲಿನ ಅಪರಾಧ ಕೃತ್ಯ ನಿಯಂತ್ರಿಸುವುದು ಹಾಗೂ ಭಯೋತ್ಪಾ ದನೆ, ಅಪರಾಧ ಕೃತ್ಯ ನಿಯಂತ್ರಿಸಲು ಅನುವಾಗುವಂತೆ ಜನ ಸೇರುವ ಖಾಸಗಿ ಸ್ಥಳದಲ್ಲಿ ಖಾಸಗಿ ವ್ಯಕ್ತಿಯೇ ಸಿಸಿ ಟೀವಿ ಅಳವಡಿಸಬೇಕು ಎಂಬ ಕಾಯಿದೆಯನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ಮಂಡಿಸಿ ಅಂಗೀಕಾರ ಪಡೆದರು.
ಬೆಳಗಾವಿ(ನ.16): ರಾಜ್ಯದಲ್ಲಿನ ವಿವಿಧ ಕೈಗಾರಿಕೆ, ವಾಣಿಜ್ಯ ಸಂಸ್ಥೆ, ಧಾರ್ಮಿಕ ಸ್ಥಳ, ಆಸ್ಪತ್ರೆ, ಶಾಲಾ-ಕಾಲೇಜು ಸೇರಿ ಎಲ್ಲಾ ಜನಸಂದಣಿ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಟೀವಿ ಕ್ಯಾಮರಾ ಅಳವಡಿಸಬೇಕು.
ನಿಯಮ ಉಲ್ಲಂಘಿಸಿದರೆ ಸಂಸ್ಥೆಗಳನ್ನು ನೋಟಿಸ್ ನೀಡಿ ಮುಚ್ಚಲು ಅನುವಾಗುವ ಸಾರ್ವಜನಿಕ ಸುರಕ್ಷತೆಯ ಕ್ರಮಗಳ ಜಾರಿ ವಿಧೇಯಕಕ್ಕೆ ರಾಜ್ಯ ಸರ್ಕಾರವು ಬುಧವಾರ ಮೇಲ್ಮನೆ ಅಂಗೀಕಾರ ಪಡೆದಿದೆ. ಇದೀಗ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ರಾಜ್ಯಪಾಲರ ಅಂಕಿತ ಬಿದ್ದ ನಂತರ ಈ ವಿಧೇಯಕ ಕಾಯ್ದೆಯಾಗಿ ಜಾರಿಗೆ ಬರಲಿದೆ.
ಸಾರ್ವಜನಿಕ ಸ್ಥಳಗಳು, ಜನಸಂದಣಿ ಇರುವ ಖಾಸಗಿ ಸ್ಥಳಗಳಲ್ಲಿನ ಅಪರಾಧ ಕೃತ್ಯ ನಿಯಂತ್ರಿಸುವುದು ಹಾಗೂ ಭಯೋತ್ಪಾ ದನೆ, ಅಪರಾಧ ಕೃತ್ಯ ನಿಯಂತ್ರಿಸಲು ಅನುವಾಗುವಂತೆ ಜನ ಸೇರುವ ಖಾಸಗಿ ಸ್ಥಳದಲ್ಲಿ ಖಾಸಗಿ ವ್ಯಕ್ತಿಯೇ ಸಿಸಿ ಟೀವಿ ಅಳವಡಿಸಬೇಕು ಎಂಬ ಕಾಯಿದೆಯನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ಮಂಡಿಸಿ ಅಂಗೀಕಾರ ಪಡೆದರು.
ಬಿಬಿಎಂಪಿ, ನಗರ ಪಾಲಿಕೆ ವ್ಯಾಪ್ತಿ ಹಾಗೂ ಬಳಿಕ ಕಾಲಕಾಲಕ್ಕೆ ಸರ್ಕಾರ ಗುರುತಿಸಿರುವ ಪ್ರದೇಶಗಳಲ್ಲಿನ ಖಾಸಗಿ ವಾಣಿಜ್ಯ ಕೇಂದ್ರಗಳಲ್ಲಿ ಒಂದೇ ವೇಳೆಗೆ 100ಕ್ಕೂ ಹೆಚ್ಚು ಜನ ಸೇರುವಂತಿದ್ದರೆ ಕಡ್ಡಾಯವಾಗಿ ಸಿಸಿಟೀವಿ ಅಳವಡಿಕೆ ಮಾಡಬೇಕು. ಆದೇಶ ಹೊರಡಿಸಿದ 3 ತಿಂಗಳೊಳಗಾಗಿ ಸಿಸಿಟೀವಿ ಹಾಕದಿದ್ದರೆ ಮೊದಲ ತಿಂಗಳು 5 ಸಾವಿರ ರು., ಎರಡನೇ ತಿಂಗಳು 10 ಸಾವಿರ ರು. ದಂಡ ವಿಧಿಸಲಾಗುವುದು. ಬಳಿಕವೂ ಅಳವಡಿಸದಿದ್ದರೆ ಧಾರ್ಮಿಕ ಕೇಂದ್ರ, ಶೈಕ್ಷಣಿಕ, ಆಸ್ಪತ್ರೆ ಸಂಸ್ಥೆ ಬಿಟ್ಟು ಉಳಿದವುಗಳನ್ನು ಮುಚ್ಚಲಾಗುವುದು.