ನೀಟ್ ವಿದ್ಯಾರ್ಥಿಗಳೇ ಗಮನಿಸಿ; ಈ ಬಾರಿ ಪಠ್ಯಕ್ರಮದಲ್ಲಿ ಬದಲಾವಣೆ ಇಲ್ಲ

First Published 21, Jan 2018, 11:32 AM IST
CBSE releases clarification  confirms no change in syllabus from last year
Highlights

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷೆಗೆ ರಾಜ್ಯಗಳ ಪಠ್ಯಕ್ರಮವನ್ನೂ ಪರಿಗಣಿಸಲಾಗುವುದು ಎಂದು ಹೇಳಿದ್ದ ಕೇಂದ್ರ ಸರ್ಕಾರ ಇದೀಗ ಉಲ್ಟಾ ಹೊಡೆದಿದ್ದು, 2018 ರ ನೀಟ್ ಪಠ್ಯಕ್ರಮದಲ್ಲಿ ಯಾವುದೇ ಬಲದಾವಣೆ ಇಲ್ಲ ಎಂದು ಶನಿವಾರ ತಿಳಿಸಿದೆ.

ನವದೆಹಲಿ (ಜ.21): ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷೆಗೆ ರಾಜ್ಯಗಳ ಪಠ್ಯಕ್ರಮವನ್ನೂ ಪರಿಗಣಿಸಲಾಗುವುದು ಎಂದು ಹೇಳಿದ್ದ ಕೇಂದ್ರ ಸರ್ಕಾರ ಇದೀಗ ಉಲ್ಟಾ ಹೊಡೆದಿದ್ದು, 2018 ರ ನೀಟ್ ಪಠ್ಯಕ್ರಮದಲ್ಲಿ ಯಾವುದೇ ಬಲದಾವಣೆ ಇಲ್ಲ ಎಂದು ಶನಿವಾರ ತಿಳಿಸಿದೆ.

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಸಿ) ತನ್ನ ವೆಬ್‌ಸೈಟ್‌ನಲ್ಲಿ ಅಧೀಸೂಚನೆ  ಹೊರಡಿಸಿದ್ದು, 2018 ರ ನೀಟ್ ಪರೀಕ್ಷೆಯ ಪಠ್ಯಕ್ರಮದಲ್ಲಿ ಯಾವುದೇ ಬದಲವಣೆ ಇಲ್ಲ ಎಂದು ತಿಳಿಸಿದೆ. 2017 ರಲ್ಲಿ ಮೆ ೭ರಂದು ನೀಟ್ ಪರೀಕ್ಷೆಯನ್ನು ನಡೆಸಲಾಗಿತ್ತು. ಹೀಗಾಗಿ ಈ ವರ್ಷವೂ ಮೇ ಮೊದಲ ವಾರದಲ್ಲಿ ನೀಟ್ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.

 

loader