Asianet Suvarna News Asianet Suvarna News

ಗಣಿತ ಕಷ್ಟ ಎನ್ನು​ವ​ವ​ರಿಗೆ ‘ಸುಲಭ’ ಪ್ರಶ್ನೆ​ಪ​ತ್ರಿ​ಕೆ?

ಗಣಿತ ಎಂಬುದು ಕಬ್ಬಿ​ಣದ ಕಡಲೆ ಎಂದು ದೂರುವ ವಿದ್ಯಾ​ರ್ಥಿ​ಗ​ಳಿ​ಗಾಗಿ ಪರಿ​ಹಾ​ರ​ವೊಂದನ್ನು ಹುಡುಕಲು ಕೇಂದ್ರೀಯ ಮಾಧ್ಯ​ಮಿಕ ಶಿಕ್ಷಣ ಮಂಡಳಿ (ಸಿ​ಬಿ​ಎ​ಸ್‌​ಇ) ಮುಂದಾ​ಗಿದೆ. ಉನ್ನತ ಶಿಕ್ಷ​ಣ​ದಲ್ಲಿ ಗಣಿತ ವ್ಯಾಸಂಗ ಮಾಡುವ ಉದ್ದೇ​ಶ​ವಿ​ಲ್ಲದ ವಿದ್ಯಾ​ರ್ಥಿ​ಗ​ಳಿ​ಗಾಗಿ ‘ಸುಲ​ಭ’ ಹಾಗೂ ಗಣಿ​ತ​ವನ್ನೊ​ಳ​ಗೊಂಡ ಉನ್ನತ ಶಿಕ್ಷ​ಣದ ಮೊರೆ ಹೋಗು​ವ​ವ​ರಿ​ಗಾಗಿ ‘ಕಠಿ​ಣ’ ಪ್ರಶ್ನೆ​ಪ​ತ್ರಿಕೆ ರೂಪಿ​ಸ​ಬೇ​ಕೆಂಬ ಪ್ರಸ್ತಾ​ವ​ನೆ​ಯನ್ನು ಗಂಭೀ​ರ​ವಾಗಿ ಪರಿ​ಶೀ​ಲಿ​ಸು​ತ್ತಿ​ದೆ

CBSE plans two maths papers: One easy and the other tough

ನವ​ದೆ​ಹ​ಲಿ(ಜೂ.01): ಗಣಿತ ಎಂಬುದು ಕಬ್ಬಿ​ಣದ ಕಡಲೆ ಎಂದು ದೂರುವ ವಿದ್ಯಾ​ರ್ಥಿ​ಗ​ಳಿ​ಗಾಗಿ ಪರಿ​ಹಾ​ರ​ವೊಂದನ್ನು ಹುಡುಕಲು ಕೇಂದ್ರೀಯ ಮಾಧ್ಯ​ಮಿಕ ಶಿಕ್ಷಣ ಮಂಡಳಿ (ಸಿ​ಬಿ​ಎ​ಸ್‌​ಇ) ಮುಂದಾ​ಗಿದೆ. ಉನ್ನತ ಶಿಕ್ಷ​ಣ​ದಲ್ಲಿ ಗಣಿತ ವ್ಯಾಸಂಗ ಮಾಡುವ ಉದ್ದೇ​ಶ​ವಿ​ಲ್ಲದ ವಿದ್ಯಾ​ರ್ಥಿ​ಗ​ಳಿ​ಗಾಗಿ ‘ಸುಲ​ಭ’ ಹಾಗೂ ಗಣಿ​ತ​ವನ್ನೊ​ಳ​ಗೊಂಡ ಉನ್ನತ ಶಿಕ್ಷ​ಣದ ಮೊರೆ ಹೋಗು​ವ​ವ​ರಿ​ಗಾಗಿ ‘ಕಠಿ​ಣ’ ಪ್ರಶ್ನೆ​ಪ​ತ್ರಿಕೆ ರೂಪಿ​ಸ​ಬೇ​ಕೆಂಬ ಪ್ರಸ್ತಾ​ವ​ನೆ​ಯನ್ನು ಗಂಭೀ​ರ​ವಾಗಿ ಪರಿ​ಶೀ​ಲಿ​ಸು​ತ್ತಿ​ದೆ.
ದೇಶದ ವಿವಿಧ ಶಾಲೆ​ಗಳು ಹಾಗೂ ಪ್ರಾಂಶು​ಪಾ​ಲ​ರ ಮನ​ವಿ​ಯನ್ನು ಸ್ವೀಕ​ರಿ​ಸಿ​ರುವ ಸಿಬಿ​ಎ​ಸ್‌ಇ, 9, 10, 11 ಹಾಗೂ 12ನೇ ತರ​ಗ​ತಿಯ ಗಣಿತ ಪರೀಕ್ಷೆ ವೇಳೆ ಎರಡು ರೀತಿಯ ಪ್ರಶ್ನೆ ಪತ್ರಿ​ಕೆ​ಗ​ಳನ್ನು ರೂಪಿ​ಸುವ ಕುರಿತು ಆಲೋ​ಚ​ನೆ​ಯಲ್ಲಿ ತೊಡ​ಗಿದೆ ಎಂದು ಮೂಲ​ಗಳು ತಿಳಿ​ಸಿ​ವೆ.
ವೈದ್ಯ​ಕೀಯ ಹಾಗೂ ಅರ್ಥ​ಶಾ​ಸ್ತ್ರ​ದಂತಹ ಕೋರ್ಸ್‌​ಗ​ಳನ್ನು ಉನ್ನ​ತ ಶಿಕ್ಷ​ಣ​ದಲ್ಲಿ ಕಲಿ​ಯ​ಬೇಕು ಎಂಬ ಉದ್ದೇಶ ಹೊಂದಿ​ರು​ವ​ವ​ರಿಗೆ ಅತ್ಯು​ನ್ನತ ದರ್ಜೆಯ ಗಣಿತ ವ್ಯಾಸಂಗದ ಅಗ​ತ್ಯ​ವಿ​ರು​ವು​ದಿಲ್ಲ. ಆದರೂ ಪ್ರೌಢ​ಶಾಲಾ ಹಂತ​ದಲ್ಲಿ ಒಂದೇ ರೀತಿಯ ಪ್ರಶ್ನೆ​ಪ​ತ್ರಿ​ಕೆ​ಗ​ಳನ್ನು ರೂಪಿ​ಸ​ಲಾ​ಗು​ತ್ತಿ​ರು​ವು​ದ​ರಿಂದ, ಗಣಿ​ತದ ಬಗ್ಗೆ ಆಸಕ್ತಿ ಇಲ್ಲದ ವಿದ್ಯಾ​ರ್ಥಿ​ಗಳು ಸಮಸ್ಯೆ ಎದು​ರಿ​ಸು​ತ್ತಿ​ದ್ದಾರೆ. ಬೇರೆಲ್ಲ ವಿಷ​ಯ​ಗ​ಳಲ್ಲಿ ಉತ್ತಮ ಅಂಕ ಗಳಿ​ಸಿ​ದರೂ, ಗಣಿ​ತ​ದಲ್ಲಿ ಪಡೆ​ಯುವ ಕಡಿಮೆ ಅಂಕ​ಗ​ಳಿಂದಾಗಿ ಅವರ ಒಟ್ಟಾರೆ ಸಾಧ​ನೆಯೇ ತಗ್ಗು​ತ್ತಿದೆ. ಹೀಗಾಗಿ ಎರಡು ರೀತಿಯ ಪ್ರಶ್ನೆ ಪತ್ರಿ​ಕೆ​ಗ​ಳನ್ನು ಪ್ರೌಢ​ಶಾಲಾ ಹಂತ​ದಲ್ಲಿ ರೂಪಿ​ಸುವ ಕುರಿತು ಸಿಬಿ​ಎ​ಸ್‌ಇ ಚಿಂತನೆ ನಡೆ​ಸು​ತ್ತಿದೆ ಎಂದು ಹೇಳ​ಲಾ​ಗಿದೆ. ಈ ಕ್ರಮಕ್ಕೆ ಶಿಕ್ಷ​ಕ​ರಿಂದಲೂ ಮೆಚ್ಚುಗೆ ವ್ಯಕ್ತ​ವಾ​ಗಿದೆ. ಎರಡು ರೀತಿಯ ಪ್ರಶ್ನೆ​ಪ​ತ್ರಿಕೆ ರೂಪಿ​ಸ​ಬೇ​ಕೆಂದರೆ ಎರಡು ಪಠ್ಯ​ಕ್ರ​ಮ​ವನ್ನೇ ಸಿದ್ಧ​ಪ​ಡಿ​ಸ​ಬೇ​ಕಾ​ಗು​ತ್ತದೆ ಎಂದು ಈ ವಿಷ​ಯದ ಬಗ್ಗೆ ಮಾಹಿತಿ ಇರುವ ವ್ಯಕ್ತಿ​ಯೊಬ್ಬರು ತಿಳಿ​ಸಿ​ದ್ದಾ​ರೆ.

Follow Us:
Download App:
  • android
  • ios