ನೀಟ್'ನಲ್ಲಿ ಉತ್ತೀರ್ಣರಾಗಲು ಸಾಮಾನ್ಯ ವರ್ಗದವರಿಗೆ 131 ಹಾಗೂ ಮೀಸಲು ವಿದ್ಯಾರ್ಥಿಗಳು 107 ಅಂಕಗಳನ್ನು ವಿಧಿಸಲಾಗಿತ್ತು.ನೀಟ್ ಫಲಿತಾಂಶ ಪ್ರಕಟಿಸಬಾರದೆಂದು ಮೇ.24ರಂದು ಮದ್ರಾಸ್ ಹೈಕೋರ್ಟ್ ತಡೆ ನೀಡಿದ್ದನ್ನು ಸುಪ್ರಿಂ ಕೋರ್ಟ್ ಜೂನ್ 12ರಂದು ತೆರವುಗೊಳಿಸಿತ್ತು.

ನವದೆಹಲಿ(ಜೂ.23):ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಇಂದು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್'ನ ನೀಟ್ 2017ನೇ ಸಾಲಿನ ಫಲಿತಾಂಶ ಪ್ರಕಟಿಸಿದ್ದು ಪಂಜಾಬ್'ನ ನವದೀಪ್ ಸಿಂಗ್ 700 ಅಂಕಗಳಿಗೆ 697 ಪಡೆಯುವ ಮೂಲಕ ಮೊದಲ ರ‌್ಯಾಂಕ್ ಪಡೆದಿದ್ದು, ಮಧ್ಯ ಪ್ರದೇಶದ ಅರ್ಚಿತ್ ಗುಪ್ತ ಹಾಗೂ ಮನೀಶ್ ಮುಲ್'ಚಾಂದಿನಿ 2 ಮತ್ತು 3ನೇ ಶ್ರೀಣ ಗಳಿಸಿದ್ದಾರೆ.

ನೀಟ್'ನಲ್ಲಿ ಉತ್ತೀರ್ಣರಾಗಲು ಸಾಮಾನ್ಯ ವರ್ಗದವರಿಗೆ 131 ಹಾಗೂ ಮೀಸಲು ವಿದ್ಯಾರ್ಥಿಗಳು 107 ಅಂಕಗಳನ್ನು ವಿಧಿಸಲಾಗಿತ್ತು.ನೀಟ್ ಫಲಿತಾಂಶ ಪ್ರಕಟಿಸಬಾರದೆಂದು ಮೇ.24ರಂದು ಮದ್ರಾಸ್ ಹೈಕೋರ್ಟ್ ತಡೆ ನೀಡಿದ್ದನ್ನು ಸುಪ್ರಿಂ ಕೋರ್ಟ್ ಜೂನ್ 12ರಂದು ತೆರವುಗೊಳಿಸಿತ್ತು.

1522 ಅನಿವಾಸಿ ಭಾರತೀಯರು, 613 ವಿದೇಶಿಯರು ಒಳಗೊಂಡಂತೆ ದೇಶಾದ್ಯಂತ ಒಟ್ಟು 11,38,890 ವಿದ್ಯಾರ್ಥಿಗಳು ಮೇ.7ರಂದು ಪರೀಕ್ಷೆಗೆ ನೋಂದಾಯಿಸಿದ್ದರು. ರಾಷ್ಟ್ರದ 103 ಪಟ್ಟಣಗಳಲ್ಲಿ 1921 ಪರೀಕ್ಷಾ ಕೇಂದ್ರಗಳಲ್ಲಿ 10 ಭಾಷೆಗಳಲ್ಲಿ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು.

cbseneet.nic.in ವೆಬ್'ಸೈಟ್'ನಲ್ಲಿ ಪ್ರವೇಶ ಸಂಖ್ಯೆಯ ಜೊತೆಗೆ ಇತರ ಅಗತ್ಯ ವಿವರಗಳನ್ನು ನಮೂದಿಸಿ ಫಲಿತಾಂಶ ಪಡೆಯಬಹುದು.

ರಾಜ್ಯದ ಪಿ.ವೈ. ಗಣೇಶ್'ಗೆ 6ನೇ ರ‌್ಯಾಂಕ್

ನೀಟ್ ಪರೀಕ್ಷೆಯಲ್ಲಿ ದಾವಣಗೆರೆಯ ಪಿ.ವೈ. ಗಣೇಶ್ 6ನೇ ರ‌್ಯಾಂಕ್ ಪಡೆದಿದ್ದಾರೆ.ಹಾವೇರಿ ಜಿಲ್ಲೆಯ ಬ್ಯಾಡಗಿಯ ವಾಸಿಯಾದ ಇವರು ಪಿಯುಸಿನಲ್ಲಿ ಶೇ.94.5 ಫಲಿತಾಂಶ ಪಡೆದಿದ್ದರು.