ನವದೆಹಲಿ(ಮೇ.16): ಮಹತ್ವದ ಬೆಳವಣಿಗೆಯೊಂದರಲ್ಲಿ ಬೋಫೋರ್ಸ್ ಖರೀದಿ ಹಗರಣದ ಕುರಿತು ಮುಂದಿನ ಹಂತದ ತನಿಖೆಗೆ ಅನುಮತಿ ಕೋರಿ ದೆಹಲಿ ಕೋರ್ಟ್ ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸಿಬಿಐ ಹಿಂಪಡೆದಿದೆ.

ಕಳೆದ ಫೆಬ್ರವರಿ 1, 2018 ರಂದು ಸಲ್ಲಿಸಲಾದ ಅರ್ಜಿಯನ್ನು ಹಿಂಪಡೆಯುವುದಾಗಿ ಮ್ಯಾಜಿಸ್ಟ್ರೇಟ್ ನವನ್ ಕುಮಾರ್ ಕಶ್ಯಪ್ ಅವರ ಪೀಠಕ್ಕೆ ಸಿಬಿಐ ಸ್ಪಷ್ಟಪಡಿಸಿದೆ.

ಸದ್ಯ ಅರ್ಜಿಯನ್ನು ಹಿಂಪಡೆಯುತ್ತಿದ್ದು ಮುಂದಿನ ಕ್ರಮಗಳ ಕುರಿತು ಸದ್ಯದಲ್ಲೇ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ತನಿಖಾ ಏಜನ್ಸಿ ಕೋರ್ಟ್ ಗೆ ಹೇಳಿದೆ.

ಇದಕ್ಕೆ ಮುನ್ನ ಸಿಬಿಐ ಈ ಅರ್ಜಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ರವಾನಿಸಿದ್ದು, ತಾವು ಮತ್ತೆ ಹೊಸ ದಾಖಲೆ ಮತ್ತು ಸಾಕ್ಷಿಗಳನ್ನು ಹೊಂದಿದ್ದು, ಬೋಫೋರ್ಸ್ ಬಗೆಗೆ ಹೊಸದಾಗಿ ತನಿಖೆ ಮುಂದುವರಿಸಲು ಅವಕಾಶ ಕಲ್ಪಿಸಿಕೊಡುವಂತೆ ನ್ಯಾಯಾಲಯಕ್ಕೆ ಸಿಬಿಐ ಮನವಿ ಮಾಡಿತ್ತು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.