ರೈಲ್ವೆಯ ತತ್ಕಾಲ್ ರಿಸರ್ವೇಶನ್ ವ್ಯವಸ್ಥೆಯನ್ನು ತಿರುಚುವ ಅಕ್ರಮ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಿದ್ದ ತನ್ನ ಸಾಫ್ಟ್‌ವೇರ್ ಪ್ರೋಗ್ರಾಮರ್ ಅನ್ನು ಸಿಬಿಐ ಬಂಧಿಸಿದೆ.
ನವದೆಹಲಿ (ಡಿ.28): ರೈಲ್ವೆಯ ತತ್ಕಾಲ್ ರಿಸರ್ವೇಶನ್ ವ್ಯವಸ್ಥೆಯನ್ನು ತಿರುಚುವ ಅಕ್ರಮ ಸಾಫ್ಟ್ವೇರ್ ಅಭಿವೃದ್ಧಿ ಪಡಿಸಿದ್ದ ತನ್ನ ಸಾಫ್ಟ್ವೇರ್ ಪ್ರೋಗ್ರಾಮರ್ ಅನ್ನು ಸಿಬಿಐ ಬಂಧಿಸಿದೆ.
ಒಂದೇ ಸಲಕ್ಕೆ ನೂರಾರು ಟಿಕೆಟ್ಗಳನ್ನು ಬುಕ್ ಮಾಡಬಹುದಾದ ವ್ಯವಸ್ಥೆಯುಳ್ಳ ಅಕ್ರಮ ಸಾಫ್ಟ್ವೇರ್ ರಚಿಸಿದ್ದ ಬಗ್ಗೆ ಆಪಾದನೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. 2007-11ರ ನಡುವೆ ನಾಲ್ಕು ವರ್ಷಗಳ ಕಾಲ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ನಿಯಮಿತ (ಐಆರ್ಸಿಟಿಸಿ)ದಲ್ಲಿ ಕಾರ್ಯ ನಿರ್ವಹಿಸಿದ್ದ ಸಿಬಿಐ ಸಹಾಯಕ ಪ್ರೋಗ್ರಾಮರ್ ಅಜಯ್ ಗರ್ಗ್, ರೈಲ್ವೆ ಟಿಕೆಟಿಂಗ್ ವ್ಯವ ಸ್ಥೆಯ ದೌರ್ಬಲ್ಯಗಳನ್ನು ತಿಳಿದು, ಈ ಸಾಫ್ಟ್ವೇರ್ ಮಾಡಿದ್ದ. ಗರ್ಗ್ ಜೊತೆಗೆ ಇನ್ನೋರ್ವ ಖಾಸಗಿ ವ್ಯಕ್ತಿ ಅನಿಲ್ ಗುಪ್ತಾ ಎಂಬಾತನನ್ನೂ ಬಂಧಿಸಲಾಗಿದೆ. ಈತ ಈ ಸಾಫ್ಟ್ವೇರ್ ಅನ್ನು ಏಜೆಂಟ್ಗಳಿಗೆ ಮಾರಾಟ ಮಾಡಿದ್ದಾನೆ.
ಜೌನ್ಪುರದಲ್ಲಿ ಏಳು ಮತ್ತು ಮುಂಬೈಯಲ್ಲಿ ಮೂರು ಏಜೆಂಟರು ಈ ಸಾಫ್ಟ್ವೇರ್ ಪಡೆದಿ ರುವುದನ್ನು ಗುರುತಿಸಲಾಗಿದೆ. ಒಂದೇ ಬಾರಿ ನೂರಾರು ಟಿಕೆಟ್ಗಳನ್ನು ಬುಕ್ ಮಾಡ ಬಹುದಾದ ಸಾಫ್ಟ್ವೇರ್ ಇದಾಗಿದ್ದು, ನಿಜ ವಾದ ಪ್ರಯಾಣಿಕರು ಇದರಿಂದ ವಂಚಿತರಾಗುತ್ತಿದ್ದರು.
