ಚೆನ್ನೈನ ನುಂಗಬಾಕಂ ಪ್ರದೇಶಗಳಲ್ಲಿರುವ ಮನೆ ಮೇಲೆ ಸುಮಾರು 10 ಕ್ಕೂ ಹೆಚ್ಚು ಹಿರಿಯ ಸಿಬಿಐ ಅಧಿಕಾರಿಗಳಿಂದ ದಾಳಿ ನಡೆದಿದೆ. ಬೇನಾಮಿ ಆಸ್ತಿ ಗಳಿಕೆ, ಏರ್ಸೆಲ್-ಮ್ಯಾಕ್ಸಿಸ್ ಕಂಪನಿಯಲ್ಲಿ ಅಕ್ರಮವಾಗಿ ಹಣ ಹೂಡಿಕೆ, ಹಣ ವರ್ಗಾವಣೆ ನಿಯಮ ಉಲ್ಲಂಘನೆ ಹಾಗೂ 45 ಕೋಟಿ ರೂಪಾಯಿ ಕಾನೂನು ಬಾಹಿರ ಹೂಡಿಕೆ ಆರೋಪದಡಿ ಸಿಬಿಐ ದಾಳಿ ನಡೆದಿದೆ.
ಚೆನ್ನೈ (ಮೇ.16): ಇಂದು ಬೆಳ್ಳಂಬೆಳಗ್ಗೆ ಮಾಜಿ ಕೇಂದ್ರ ಸಚಿವ ಚಿದಂಬರಂ ಹಾಗೂ ಅವರ ಪುತ್ರನ ಮನೆ ಮೇಲೆ ಸಿಬಿಐ ದಾಳಿ ನಡೆದಿದೆ.
ಚೆನ್ನೈನ ನುಂಗಬಾಕಂ ಪ್ರದೇಶಗಳಲ್ಲಿರುವ ಮನೆ ಮೇಲೆ ಸುಮಾರು 10 ಕ್ಕೂ ಹೆಚ್ಚು ಹಿರಿಯ ಸಿಬಿಐ ಅಧಿಕಾರಿಗಳಿಂದ ದಾಳಿ ನಡೆದಿದೆ. ಬೇನಾಮಿ ಆಸ್ತಿ ಗಳಿಕೆ, ಏರ್ಸೆಲ್-ಮ್ಯಾಕ್ಸಿಸ್ ಕಂಪನಿಯಲ್ಲಿ ಅಕ್ರಮವಾಗಿ ಹಣ ಹೂಡಿಕೆ, ಹಣ ವರ್ಗಾವಣೆ ನಿಯಮ ಉಲ್ಲಂಘನೆ ಹಾಗೂ 45 ಕೋಟಿ ರೂಪಾಯಿ ಕಾನೂನು ಬಾಹಿರ ಹೂಡಿಕೆ ಆರೋಪದಡಿ ಸಿಬಿಐ ದಾಳಿ ನಡೆದಿದೆ.
ಏಕಕಾಲದಲ್ಲಿ ಚೆನ್ನೈನ 16 ಕಡೆಗಳಲ್ಲಿ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ಕಾಳಧನಿಕರಿಗೆ ಶಾಕ್ ನೀಡಿದ್ದಾರೆ. ಇನ್ನು ಸಿಬಿಐ ದಾಳಿ ಕುರಿತು ಪ್ರತಿಕ್ರಿಯಿಸಿರುವ ಪಿ. ಚಿದಂಬರಂ ದಾಳಿ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ನಾನು ಎಲ್ಲಾ ವ್ಯವಹಾರಗಳನ್ನು ಕಾನೂನು ಪ್ರಕಾರವಾಗಿಯೇ ಮಾಡಿದ್ದೇನೆ. ಆದರೆ ಕೇಂದ್ರದ ಮೋದಿ ಸರ್ಕಾರ ನನ್ನ ಮತ್ತು ಕುಟುಂಬ ಹಾಗೂ ಸ್ನೇಹಿತರನ್ನು ಟಾರ್ಗೆಟ್ ಮಾಡಿದೆ. ಹಾಗಾಗಿ ನನ್ನ ಹಾಗೂ ನನ್ನ ಪುತ್ರನ ಮನೆ ಮೇಲೆ ದಾಳಿ ನಡೆದಿದೆ. ಇದು ಬಿಜೆಪಿ ನನ್ನ ವಿರುದ್ದ ಮಾಡಿದ ಕುತಂತ್ರ ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ದಾಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಹೇಳಿದೆ.