`ಯಾವ ಕಾರಣಕ್ಕೆ ನೀವು ರೇಡ್​ ಮಾಡಿದ್ದೀರಾ..? ಎಂದು ಪ್ರಶ್ನಿಸಿರುವ ನಿರ್ದೇಶಕರು, ಸಿಬಿಐ ದಾಳಿ ನಡೆಸಿದ ಒಂದು ವಾರದ ನಂತರ ದಾಳಿ ನಡೆಸುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದ್ದಾರೆ. ಕೇಂದ್ರೀಯ ಸಂಸ್ಥೆಗಳಾದ ಇಡಿ, ಐಟಿ, ಸಿಬಿಐ ತನಿಖೆ ನಡೆಸುತ್ತಿರುವಾಗ ನೀವು ದಾಳಿ ಮಾಡಿದ್ದೇಕೆ..? ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಸಿಬಿಐ ಎಫ್​ಐಆರ್​ ದಾಖಲಿಸಿಕೊಂಡಿದೆ. ಅದೇ ಕಾನೂನಿನ ಅಡಿಯಲ್ಲಿ ನೀವ್ಯಾಕೆ ಎಫ್​ಐಆರ್​ ದಾಖಲಿಸಿಕೊಂಡಿದ್ದೀರಿ ಎಂದು ಸಿಬಿಐ ಜಂಟಿ ನಿರ್ದೇಶಕರು ಎಸಿಬಿ ಹಿರಿಯ ಅಧಿಕಾರಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಬೆಂಗಳೂರು(ಡಿ.19): ಇಬ್ಬರು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳನ್ನ ಸಿಬಿಐ ತರಾಟೆಗೆ ತೆಗೆದುಕೊಂಡಿದೆ. ಎಸಿಬಿಯ ಹಿರಿಯ ಅಧಿಕಾರಿಗೆ ಪೋನ್​ ಮಾಡಿದ್ದ ಸಿಬಿಐ ಜಂಟಿ ನಿರ್ದೇಶಕರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

`ಯಾವ ಕಾರಣಕ್ಕೆ ನೀವು ರೇಡ್​ ಮಾಡಿದ್ದೀರಾ..? ಎಂದು ಪ್ರಶ್ನಿಸಿರುವ ನಿರ್ದೇಶಕರು, ಸಿಬಿಐ ದಾಳಿ ನಡೆಸಿದ ಒಂದು ವಾರದ ನಂತರ ದಾಳಿ ನಡೆಸುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದ್ದಾರೆ. ಕೇಂದ್ರೀಯ ಸಂಸ್ಥೆಗಳಾದ ಇಡಿ, ಐಟಿ, ಸಿಬಿಐ ತನಿಖೆ ನಡೆಸುತ್ತಿರುವಾಗ ನೀವು ದಾಳಿ ಮಾಡಿದ್ದೇಕೆ..? ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಸಿಬಿಐ ಎಫ್​ಐಆರ್​ ದಾಖಲಿಸಿಕೊಂಡಿದೆ. ಅದೇ ಕಾನೂನಿನ ಅಡಿಯಲ್ಲಿ ನೀವ್ಯಾಕೆ ಎಫ್​ಐಆರ್​ ದಾಖಲಿಸಿಕೊಂಡಿದ್ದೀರಿ ಎಂದು ಸಿಬಿಐ ಜಂಟಿ ನಿರ್ದೇಶಕರು ಎಸಿಬಿ ಹಿರಿಯ ಅಧಿಕಾರಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಐಟಿ ದಾಳಿ ನಡೆದು ಒಂದು ವಾರದ ನಂತರ ಜಯಚಂದ್ರ ಮತ್ತು ಚಿಕ್ಕರಾಯಪ್ಪ ಮನೆ ಮೇಲೆ ಎಸಿಬಿ ದಾಳಿ ಮಾಡಿತ್ತು.