ಬೆಂಗಳೂರು(ಸೆ.12): ಕಾವೇರಿ ಕದನ ಜೋರಾಗಿದ್ದು, ರಾಜ್ಯದೆಲ್ಲೆಡೆ ಪ್ರತಿಭಟನೆ ಹೆಚ್ಚುತ್ತಿದೆ. ನೀರು ಹಂಚಿಕೆ ಆದೇಶ ಮಾರ್ಪಾಡು ಮಾಡುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದ್ದು, ಮತ್ತೊಮ್ಮೆ ಕರ್ನಾಟಕ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.

ಕರ್ನಾಟಕ ಸರ್ಕಾರದ ಮನವಿಯನ್ನು ಪುರಸ್ಕರಿಸದ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಸೆಪ್ಟೆಂಬರ್ 20ರವರೆಗೆ ಪ್ರತಿದಿನ 12 ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿದೆ. ಈ ಮಧ್ಯೆ ಕರ್ನಾಟಕದ ನಾಗರಿಕರು ಸುಪ್ರೀಂ ಕೋರ್ಟ್ ಆದೇಶ ಪಾಲಿಸುವುದರೊಂದಿಗೆ, ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದೂ ಆದೇಶಿಸಿದೆ.

ಸುಪ್ರೀಂ ಕೋರ್ಟ್ ನೀಡಿದ ಇಂದಿನ ಆದೇಶ ಹಾಗೂ ಈ ಮೊದಲು ನೀಡಿದ ಆದೇಶಗಳಲ್ಲಾದ ಬದಲಾವಣೆಗಳು

-ಇಂದು ಬೆಳಗ್ಗೆವರೆಗೆ 84 ಸಾವಿರ ಕ್ಯುಸೆಕ್ ನೀರು ತಮಿಳುನಾಡಿಗೆ ಬಿಡಲಾಗಿದೆ.

-ಪ್ರಸ್ತುತ ತೀರ್ಪಿನನ್ವಯ ಇಂದಿನಿಂದ 20ರವರೆಗೆ ದಿನಕ್ಕೆ 12 ಸಾವಿರ ಕ್ಯುಸೆಕ್ ಬಿಡಬೇಕು

-ಈ ಮೊದಲು ಒಟ್ಟು 15 ದಿನ,  ಕ್ಯುಸೆಕ್ ಬಿಡಬೇಕಿತ್ತು ಲಕ್ಷ ಒಂದೂವರೆ

-ಇಂದಿನ ತೀರ್ಪಿನನ್ವಯ, ಸೆ.20ರವರೆಗೆ ಒಟ್ಟು ಒಂದು ಲಕ್ಷದ  92ಸಾವಿರ ಕ್ಯುಸೆಕ್ ಬಿಡಬೇಕು.

-ಒಟ್ಟಾರೆಯಾಗಿ 42 ಸಾವಿರ ಕ್ಯುಸೆಕ್ ಅಂದರೆ 3 ಟಿಎಂಸಿ ಅಧಿಕ ನೀರು ಬಿಡುವ ಅನಿವಾರ್ಯತೆ ಈಗ ಕರ್ನಾಟಕಕ್ಕಿದೆ.

-ಮೊದಲು 13 ಟಿಎಂಸಿ ನೀರು ಬಿಡಬೇಕಿತ್ತು, ಈಗ 16 ಟಿಎಂಸಿ ಬಿಡಬೇಕು ಬಿಡಬೇಕಿದೆ.

<!--[if !supportLineBreakNewLine]--><!--[endif]-->