Asianet Suvarna News Asianet Suvarna News

ಹೇಮಾವತಿ ಜಲಾಶಯ ಪರಿಶೀಲನೆಗೆ ಕಾವೇರಿ ಅಧ್ಯಯನ ತಂಡ

ಕಾವೇರಿ ಕಣಿವೆ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ ಹಾಗೂ ಕೃಷಿ ಚಟುವಟಿಕೆಗಳ ಬಗ್ಗೆ ಪರಿಶೀಲನೆಗೆ ಆಗಮಿಸಿರುವ ಕೇಂದ್ರದ ತಂಡ, ಇವತ್ತೂ ಕೂಡಾ ಅಧ್ಯಯನ ನಡೆಸಲಿದೆ.

ಇವತ್ತು ಮಾರ್ಕೋನಹಳ್ಳಿ ಜಲಾಶಯ, ಹೇಮಾವತಿ ಜಲಾಶಯ ವೀಕ್ಷಣೆ ಹಾಗೂ ಆ ವ್ಯಾಪ್ತಿಯಲ್ಲಿ ಬರುವ ಅಚ್ಚುಕಟ್ಟು ಪ್ರದೇಶದ ಗ್ರಾಮಗಳಿಗೆ ತೆರಳಿ ರೈತರ ಜತೆ ಸಂವಾದ ಹಾಗೂ ಮಾಹಿತಿ ಪಡೆದು ರಾತ್ರಿ ತಮಿಳುನಾಡಿನ ಮೆಟ್ಟೂರಿಗೆ ತೆರಳಲಿದೆ.

Cauvery Team to Visit Hemavathy Reservoir

ಬೆಂಗಳೂರು (ಅ.08): ಕಾವೇರಿ ಕಣಿವೆ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ ಹಾಗೂ ಕೃಷಿ ಚಟುವಟಿಕೆಗಳ ಬಗ್ಗೆ ಪರಿಶೀಲನೆಗೆ ಆಗಮಿಸಿರುವ ಕೇಂದ್ರದ ತಂಡ, ಇವತ್ತೂ ಕೂಡಾ ಅಧ್ಯಯನ ನಡೆಸಲಿದೆ.

ಇವತ್ತು ಮಾರ್ಕೋನಹಳ್ಳಿ ಜಲಾಶಯ, ಹೇಮಾವತಿ ಜಲಾಶಯ ವೀಕ್ಷಣೆ ಹಾಗೂ ಆ ವ್ಯಾಪ್ತಿಯಲ್ಲಿ ಬರುವ ಅಚ್ಚುಕಟ್ಟು ಪ್ರದೇಶದ ಗ್ರಾಮಗಳಿಗೆ ತೆರಳಿ ರೈತರ ಜತೆ ಸಂವಾದ ಹಾಗೂ ಮಾಹಿತಿ ಪಡೆದು ರಾತ್ರಿ ತಮಿಳುನಾಡಿನ ಮೆಟ್ಟೂರಿಗೆ ತೆರಳಲಿದೆ.

ಕಾವೇರಿ ಕೊಳ್ಳ ಅಧ್ಯಯನ: ಎಲ್ಲೂ ಕಾಣಲಿಲ್ಲ ನೀರು; ಕಂಡದ್ದು ಒಣಗಿದ ಪೈರು

ಕೇಂದ್ರದ ಅಧ್ಯಯನ - ಎರಡನೇ ದಿನ

ಬೆಳಗ್ಗೆ 9 ಗಂಟೆಗೆ: ಕೆಆರ್‌ಎಸ್‌ನಿಂದ ಹೆಲಿಕಾಪ್ಟರ್‌ ಮೂಲಕ ಕೆ.ಆರ್‌.ಪೇಟೆಗೆ ಪ್ರಯಾಣ.

ಬೆಳಗ್ಗೆ 9.30- 10: ಹೇಮಾವತಿ ಎಡದಂಡೆ ಕಾಲುವೆ, ಮೂರ್ಖನಹಳ್ಳಿ, ತೊಂಡೇಕೆರೆ ಪ್ರದೇಶಗಳ  ವೀಕ್ಷಣೆ

ಬೆಳಗ್ಗೆ 10ರಿಂದ ಮಧ್ಯಾಹ್ನ 1: ಚಿನಕುರಳಿ, ಹೇಮಗಿರಿ ಮತ್ತು ಮಂಡಗೆರೆ ಅಣೆಕಟ್ಟು ಕಾಲುವೆ ಅಚ್ಚುಕಟ್ಟು ವೀಕ್ಷಿಸಿ ಹೊಳೆನರಸೀಪುರ ಮಾರ್ಗವಾಗಿ ಗೊರೂರಿಗೆ ಪ್ರಯಾಣ

ಮಧ್ಯಾಹ್ನ: ಹೇಮಾವತಿ ಡ್ಯಾಂ, ಹೇಮಾವತಿ ಬಲದಂಡೆ ಮೇಲು ಕಾಲುವೆ, ಅರಕಲಗೂಡು ಪರಿಶೀಲನೆ

ಸಂಜೆ 4.45: ಹಾಸನದಿಂದ ಹೆಲಿಕಾಪ್ಟರ್‌ ಮೂಲಕ ಬೆಂಗಳೂರಿಗೆ ಪ್ರಯಾಣ

ರಾತ್ರಿ 8 ಗಂಟೆ: ರಸ್ತೆ ಮಾರ್ಗವಾಗಿ ತಮಿಳುನಾಡಿನ ಮೆಟ್ಟೂರಿಗೆ ಪ್ರಯಾಣ

Latest Videos
Follow Us:
Download App:
  • android
  • ios