ಬೆಂಗಳೂರು(ಅ.04): ರೈತರ ಬೆಳೆಗಳಿಗೆ ನೀರು ಬಿಡಲು ಸರ್ಕಾರ ನಿರ್ಣಯಕೈಗೊಂಡ ಹಿನ್ನೆಲೆ ರಾತ್ರಿಯಿಂದಲೇ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಕೆಆರ್‌ಎಸ್, ಕಬಿನಿ. ಹೇಮಾವತಿ, ಹಾರಂಗಿ ಈ ನಾಲ್ಕೂ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲಾಗಿದೆ.

-ಎಚ್​.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದಿಂದ 3,500 ಕ್ಯೂಸೆಕ್​ ನೀರು ಬಿಡುಗಡೆ

-ಗೊರೂರು ಬಳಿಯಿರುವ ಹೇಮಾವತಿ ಡ್ಯಾಂ 1200 ಕ್ಯೂಸೆಕ್​ ನೀರು ಬಿಡುಗಡೆ.

-ಹಾರಂಗಿ ಡ್ಯಾಂನಿಂದ 4 ಸಾವಿರ ಕ್ಯೂಸೆಕ್​ ನೀರು ಬಿಡುಗಡೆ.

-ಕೆಆರ್​ಎಸ್​ ಡ್ಯಾಂನಿಂದ 6856 ಕ್ಯೂಸೆಕ್​ ಬಿಡುಗಡೆ ಮಾಡಲಾಗಿದೆ.

ಇದರಲ್ಲಿ ಕರ್ನಾಟಕದ ನಾಲೆಗಳಿಗೆ 2856 ಕ್ಯೂಸೆಕ್​ ನೀರು ಹರಿಸಲಾಗಿದ್ದು, ತಮಿಳುನಾಡಿನತ್ತ 4 ಸಾವಿರ ಕ್ಯೂಸೆಕ್​ ನೀರಿನ ಹರಿದುಹೋಗುತ್ತಿದೆ.