ನವದೆಹಲಿ(ಅ.18): ಕರ್ನಾಟಕ ಮತ್ತು ತಮಿಳುನಾಡಿಗೆ ಭೇಟಿ ನೀಡಿದ್ದ ಕೇಂದ್ರ ತಂಡ ನೀಡಿರುವ ವಸ್ತು ಸ್ಥಿಯ ವರದಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕರ್ನಾಟಕದ ಪರ ವಕೀಲ ಫಾಲಿ ನಾರಿಮನ್ 1 ದಿನ ಕಾಲಾವಕಾಶ  ಕೋರಿದ್ಧಾರೆ. ಆಕ್ಷೇಪಣೆ ಸಲ್ಲಿಸಲು 1 ದಿನ ಕಾಲಾವಕಾಶ ನೀಡುವ ಬಗ್ಗೆ ಮಧ್ಯಾಹ್ನ 2 ಗಂಟೆಗೆ ಸುಪ್ರೀಂ ತೀರ್ಪು ನೀಡಲಿದೆ.

ಈ ಮಧ್ಯೆ, ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಅಫಿಡವಿಟ್​ ಕುರಿತು ವಿಚಾರಣೆ ನಡೆಸಲು ತಮಿಳುನಾಡು ವಕೀಲರು ಮನವಿ ಮಾಡಿದರು. ಅರ್ಜಿ ವಿಚಾರಣೆ ಅಗತ್ಯತೆ ಬಗ್ಗೆ 1 ವಾರದಲ್ಲಿ ಆದೇಶ ನೀಡುವುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.