ಕೆಆರ್‍ಎಸ್ ಡ್ಯಾಂ, ಮೆಟ್ಟೂರು ಜಲಾಶಯ, ನಾಡಿನ ರೈತರ ಸ್ಥಿತಿ, ನೀರಿಲ್ಲದೆ ಒಣಗಿರೋ ಕರ್ನಾಟಕದ ಬೆಳೆಗಳು, ಹಚ್ಚಹಸಿರಿನಿಂದ ಕಂಗೊಳಿಸ್ತಿರೋ ತಮಿಳುನಾಡಿನ ಬೆಳೆಗಳನ್ನೂ ಕಾಲ್ಪನಿಕವಾಗಿ ರಚಿಸಿದ್ದಾರೆ
ಚಿಕ್ಕಮಗಳೂರು(ಅ. 08): ದಸರಾ ಸಂದರ್ಭದಲ್ಲಿ ರಾಜ್ಯಾದ್ಯಂತ ಸಾವಿರಾರು ಮನೆಗಳಲ್ಲಿ ದಸರಾ ಗೊಂಬೆಗಳನ್ನ ಪೂಜೆ ಮಾಡ್ತಾರೆ. ಆದ್ರೆ, ಚಿಕ್ಕಮಗಳೂರಿನ ಕೃಪಾಗಿರೀಶ್ ಕುಟುಂಬ ವಿಭಿನ್ನವಾಗಿ ದಸರಾ ಆಚರಿಸುತ್ತಿದ್ದಾರೆ. ದಸರಾ ಗೊಂಬೆಗಳ ಜೊತೆ ರಾಜ್ಯದ ಕಾವೇರಿಯ ಕಷ್ಟವನ್ನ ತೋರಿಸಿದ್ದಾರೆ.. ಕೆಆರ್ಎಸ್ ಡ್ಯಾಂ, ಮೆಟ್ಟೂರು ಜಲಾಶಯ, ನಾಡಿನ ರೈತರ ಸ್ಥಿತಿ, ನೀರಿಲ್ಲದೆ ಒಣಗಿರೋ ಕರ್ನಾಟಕದ ಬೆಳೆಗಳು, ಹಚ್ಚಹಸಿರಿನಿಂದ ಕಂಗೊಳಿಸ್ತಿರೋ ತಮಿಳುನಾಡಿನ ಬೆಳೆಗಳನ್ನೂ ಕಾಲ್ಪನಿಕವಾಗಿ ರಚಿಸಿದ್ದಾರೆ.. ಹಾಗೂ ಆದಷ್ಟು ಬೇಗ ಆ ಚಾಮುಂಡಿ ತಾಯಿ ರಾಜ್ಯಕ್ಕೆ ಬಂದಿರೋ ಕಂಟಕವನ್ನು ಶೀಘ್ರವೇ ಬಗೆಹರಿಸುವಂತೆ ಬೇಡಿಕೊಳ್ಳುತ್ತಿದ್ದಾರೆ.
ಕೃಪಾ ಗಿರೀಶ್ ಅವರ ಮನೆಯಲ್ಲಿ ಇಡಲಾಗಿರುವ ಈ ದಸರಾ ಗೊಂಬೆಯ ಚಿತ್ರಣವು ಕಾಫಿ ನಾಡಿನಾದ್ಯಂತ ಸಾಕಷ್ಟು ಸುದ್ದಿ ಮಾಡ್ತಿದೆ. ಶಾಲಾ-ಕಾಲೇಜು ಮಕ್ಕಳು, ಶಿಕ್ಷಕರು ಬಂದು ನೋಡಿ ಹೋಗ್ತಿದ್ದಾರೆ. ಕೃಪಾಗಿರೀಶ್ ಕೂಡ ತಮಗಿರೋ ಜ್ಞಾನದಿಂದಲೇ ಬರೋ ಮಕ್ಕಳಿಗೆ ವಿವಾದದ ಬಗ್ಗೆ ಸಂಪೂರ್ಣ ಮಾಹಿತಿ ನೀಡ್ತಿದ್ದಾರೆ.
ನಿಜಕ್ಕೂ ಇವ್ರಿಗೆ ಈ ನಾಡು, ನೆಲ, ಜಲದ ಮೇಲಿರೋ ಪ್ರೀತಿಗೆ ಹ್ಯಾಟ್ಸಾಫ್ ಹೇಳಲೇಬೇಕು. ಇವ್ರ ಈ ವಿಭಿನ್ನ ಪ್ರಾರ್ಥನೆ ಆ ಚಾಮುಂಡಿಗೆ ಮುಟ್ಟಿ ರಾಜ್ಯಕ್ಕೆ ಒಳ್ಳೆದಾಗ್ಲಿ ಅನ್ನೋದು ಎಲ್ಲರ ಹಾರೈಕೆ.
- ಆಲ್ದೂರು ಕಿರಣ್, ಸುವರ್ಣ ನ್ಯೂಸ್, ಚಿಕ್ಕಮಗಳೂರು
