ತಂಡವು ಸಲ್ಲಿಸುವ ವರದಿಯಿಂದ ನಮಗೆ ನ್ಯಾಯ ಸಿಗಲಿದೆ, ಸಿಎಂ ವಿಶ್ವಾಸ

ಮಂಗಳೂರು: ‘‘ಕಾವೇರಿ ವಿವಾದದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ತಂಡಕ್ಕೆ ಇಲ್ಲಿನ ಸಂಕಷ್ಟ ಅರಿವಾಗಿದೆ. ತಂಡದಿಂದಾಗಿ ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ,'' ಎಂದು ಮುಖ್ಯಮಂತ್ರಿ ಸಿದ್ದರಾಮ​ಯ್ಯ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿರುವ ಅವರು, ‘‘ತಾಂತ್ರಿಕ ತಂಡ ಕಳುಹಿಸಿ ರಾಜ್ಯದ ಸ್ಥಿತಿಯನ್ನು ಅಧ್ಯಯನ ಮಾಡುವಂತೆ ರಾಜ್ಯದ ಪರವಾಗಿ ನಾವೇ ಕೇಳಿದ್ದೆವು. ಅದರಂತೆ ಸುಪ್ರೀಂ ಕೋರ್ಟ್‌ ತಾಂತ್ರಿಕ ತಂಡವನ್ನು ಕಳುಹಿಸಿತ್ತು. ರಾಜ್ಯದ ಜನತೆಯ ಕಷ್ಟತಂಡಕ್ಕೆ ಅರಿವಾಗಿದೆ. ತಂಡವು ಸದ್ಯದ ಸ್ಥಿತಿಗತಿಯನ್ನು ಅಧ್ಯಯನ ನಡೆಸಿ ತಮಿಳುನಾಡು ಭಾಗದ ಅಧ್ಯಯನಕ್ಕೆ ತೆರಳಿದೆ. ಅದು ಸಲ್ಲಿಸುವ ವರದಿಯಿಂದ ನಮಗೆ ನ್ಯಾಯ ಸಿಗಲಿದೆ,'' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.