ಹೈದ್ರಾಬಾದ್[ಸೆ.2] ತನಗೆ ಹೋಟೆಲ್ ನೀಡಿದ್ದ ವೆಜ್ ಬಿರಿಯಾನಿಯಲ್ಲಿ ಕಂಬಳಿ ಹುಳ ಕಂಡು ಬಂದ ನಂತರ ಕಂಗಾಲಾದ ಗ್ರಾಹಕ ಆಹಾರ ಸುರಕ್ಷತಾ ಮಂಡಳಿಯ ಗಮನಕ್ಕೆ ತಂದಿದ್ದಾರೆ.

ಇದಾದ ಮೇಲೆ ಆಹಾರ ಸುರಕ್ಷತಾ ದಳದ ಅಧಿಕಾರಿಗಳು ಐಕೆಇಎಯ ರೆಸ್ಟೋರೆಂಟ್ ಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲದೇ ಹೋಟೆಲ್ ನ ಆಹಾರದ ಮಾದರಿಗಳನ್ನು ಲ್ಯಾಬ್ ಗೆ ಕೊಂಡೊಯ್ದಿದ್ದಾರೆ.

ಜತೆಗೆ 11500 ರೂ. ದಂಡ ವಿಧಿಸಿದ್ದು ಹೋಟೆಲ್ ಮ್ಯಾನೇಜರ್ ನೋಟಿಸ್ ನೀಡಿದ್ದಾರೆ. ಪುಣೆಯಲಲ್ಿರುವ ಹಲ್ದಿರಾಮ್ಸ್ ವೆಜಿಟೆಬಲ್ ಬಿರಿಯಾನಿ ಸಂಸ್ಥೆಗೂ ನೋಟಿಸ್ ನೀಡಲಾಗಿದೆ.

ಐಕೆಇಎ ರೆಸ್ಟೋರೆಂಟ್ 1000 ಜನರಿಗೆ ಏಕಕಾಲದಲ್ಲಿ ಆಹಾರ ಸೇವೆ ನೀಡುವ ಶಕ್ತಿ ಹೊಂದಿದೆ. ಕಾಫಿ, ಬಿಸ್ಕಟ್ ಸೇರಿದಂತೆ ಅನೇಕ ಪ್ರಾಡಕ್ಟ್ ಗಳನ್ನು ನೀಡುತ್ತದೆ.