ಯೂತ್ ಫೋಟೋಗ್ರಾಫಿಕ್ ಸೊಸೈಟಿ ಸಹಯೋಗದಿಂದ ಆಯೋಜಿಸಲಾಗುವ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗೆದ್ದವರಿಗೆ ರೂ.10000 ನಗದು ಬಹುಮಾನ ಸಿಗಲಿದೆ. ದ್ವಿತೀಯ ಸ್ಥಾನ ಪಡೆದವರಿಗೆ ರೂ.5000 ನಗದು ಬಹುಮಾನ ಸಿಗಲಿದೆ.

ಬೆಂಗಳೂರು (ಏ.21): ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಪ್ರತಿ ತಿಂಗಳು ಬೇರೆ ಬೇರೆ ವಿಷಯಗಳ ಮೇಲೆ ಫೋಟೋಗ್ರಾಫಿ ಸ್ಪರ್ಧೆಯನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಾರಿ ಕರ್ನಾಟಕದ ಪ್ರಾಕೃತಿಕ ಸೌಂದರ್ಯವನ್ನು ಬಿಂಬಿಸುವ ಚಿತ್ರಗಳನ್ನು ಫೋಟೋಗ್ರಾಫಿ ಪ್ರಿಯರಿಂದ ಆಹ್ವಾನಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯೂತ್ ಫೋಟೋಗ್ರಾಫಿಕ್ ಸೊಸೈಟಿ ಸಹಯೋಗದಿಂದ ಆಯೋಜಿಸಲಾಗುವ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗೆದ್ದವರಿಗೆ ರೂ.10000 ನಗದು ಬಹುಮಾನ ಸಿಗಲಿದೆ. ದ್ವಿತೀಯ ಸ್ಥಾನ ಪಡೆದವರಿಗೆ ರೂ.5000 ನಗದು ಬಹುಮಾನ ಸಿಗಲಿದೆ.

ಈ ಮುಂಚೆ ರಾಜ್ಯದ ದೇವಸ್ಥಾನಗಳು, ಬೀಚ್’ಗಳು ಹಾಗೂ ವನ್ಯಜೀವಿಗಳ ಫೋಟೋ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ತಿಂಗಳ ಸ್ಪರ್ಧೆಯ ಫೋಟೋಗಳನ್ನು ಸಲ್ಲಿಸಲು ಏ.30 ಕೊನೆಯ ದಿನಾಂಕವಾಗಿದ್ದು, ಮೇ.3ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ.

ಮೊದಲ ಬಾರಿ ಭಾಗವಹಿಸುವವರು ಇಲಾಖೆಯಲ್ಲಿ ತಮ್ ಹೆಸರನ್ನು ನೋಂದಾಯಿಸಬೇಕು. ಬಳಿಕ ತಮ್ಮ ಲಾಗಿನ್ ವಿವರಗಳನ್ನು ಬಳಸಿ ಫೋಟೋಗಳನ್ನು ಸಲ್ಲಿಸಬೇಕು. ಫೋಟೋ ಕಳುಹಿಸುವವರು ಕೆಲವು ನಿಯಮಗಳನ್ನು ಪಾಲಿಸಬೇಕು. ಅವುಗಳ ವಿವರ ಇಲ್ಲಿದೆ: http://contest.ypsbengaluru.com/