ಡಿಸಿ ರೋಹಿಣಿ ವರ್ಗ: ತೀರ್ಪು ಕಾಯ್ದಿರಿಸಿದ ಸಿಎಟಿ

First Published 2, Apr 2018, 7:03 PM IST
CAT yet to announce order regarding transfer of Rohini Sindhuri
Highlights

ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದ ವಾದ ಮಂಡನೆ ಸಿಎಟಿಯಲ್ಲಿ ಎರಡೂ ಕಡೆ  ಪೂರ್ಣಗೊಂಡಿದೆ. 

ಹಾಸನ: ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದ ವಾದ ಮಂಡನೆ ಸಿಎಟಿಯಲ್ಲಿ ಎರಡೂ ಕಡೆ  ಪೂರ್ಣಗೊಂಡಿದೆ. 
 
ವಾದ ಆಲಿಸಿದ ನಂತರ ಕೇಂದ್ರೀಯ ಆಡಳಿತ ನ್ಯಾಯಮಂಡಳಿ, ತೀರ್ಪನ್ನು ಕಾಯ್ದಿರಿಸಿದೆ. ಅವಧಿಗೂ ಮುನ್ನ ವರ್ಗಾವಣೆ ಆದೇಶ ಪ್ರಶ್ನಿಸಿದ ರೋಹಿಣಿ, ಸಿಎಟಿ ಮೊರೆ ಹೋಗಿದ್ದರು.  ಹೊಸ ಆದೇಶ ಹೊರಡಿಸುವಂತೆ ಸಿಎಟಿ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಿತ್ತು.

ಸಿಎಟಿಯ‌ ಈ ಆದೇಶಕ್ಕೆ ತಡೆ ಕೋರಿ ಡಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಂತರ ನೀವೇ ಇತ್ಯರ್ಥ ಪಡಿಸಿ ಎಂದು ಮತ್ತೆ ಸಿಎಟಿಗೆ ಸೂಚಿಸಿತ್ತು ರಾಜ್ಯ ಹೈಕೋರ್ಟ್. ಅದರಂತೆ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದು, ಸಿಎಟಿ ತೀರ್ಪು ಕುತೂಹಲ ಮೂಡಿಸಿದೆ.

loader