ಸಂಪುಟದಲ್ಲಿ ಜಾತಿವಾರು - ಜಿಲ್ಲಾವಾರು ಪ್ರಾತಿನಿಧ್ಯ ಎಷ್ಟು..?

Cast And District Representation In Karnataka Cabinet
Highlights

ಇಂದು ಮೊದಲ ಹಂತದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲು ಕಾಂಗ್ರೆಸ್ ನಿಂದ 15 ಹಾಗೂ ಜೆಡಿಎಸ್ ನಿಂದ 8 ಮುಖಂಡರು ಸಜ್ಜಾಗಿದ್ದಾರೆ. ಈ ಬಾರಿ ಜಾತಿವಾರು ಹಾಗೂ ಜಿಲ್ಲಾವಾರು ಸಿಕ್ಕಿರುವ ಪ್ರಾತಿನಿಧ್ಯ ಎಷ್ಟಿದೆ ಎನ್ನುವ ಡೀಟೇಲ್ಸ್ ಇಲ್ಲಿದೆ. 

ಬೆಂಗಳೂರು :  ಸಿಎಂ ಕಚೇರಿಯಿಂದ ಅಧಿಕೃತವಾಗಿ ಇದೀಗ ರಾಜಭವನಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ನ ಸಚಿವರ ಪಟ್ಟಿಯನ್ನು ಕಳುಹಿಸಲಾಗಿದೆ. ಕೊನೆ ಕ್ಷಣದಲ್ಲಿ ಈ ಪಟ್ಟಿಯಲ್ಲಿಯೂ ಕೂಡ ಬದಲಾವಣೆಯಾಗುವ ಸಾಧ್ಯತೆಗಳೂ ಕೂಡ ಇದೆ. ಸದ್ಯ ಈ ಪಟ್ಟಿಯಲ್ಲಿ ಕಾಂಗ್ರೆಸ್‌ನ 15 ಮಂದಿ ಇದ್ದು, ಜೆಡಿಎಸ್‌ನ 8 ಮಂದಿಯ ಹೆಸರಿದೆ. ಈ ಬಾರಿ ಜಾತಿ ಹಾಗೂ ಜಿಲ್ಲೆಗಳಿಗೆ ಸಿಕ್ಕಿರುವ ಪ್ರಾತಿನಿಧ್ಯವೇನು ಹಾಗೂ ಯಾವ ಜಿಲ್ಲೆಗಳು ಮಂತ್ರಿ ಸ್ಥಾನದಿಂದ ವಂಚಿತವಾಗಿವೆ ಇನ್ನುವ ಮಾಹಿತಿ ಇಲ್ಲಿದೆ. 

ಇನ್ನು ನೀಡಿರುವ ಪಟ್ಟಿಯಲ್ಲಿ 14 ಜಿಲ್ಲೆಗಳು ಮಂತ್ರಿ ಸ್ಥಾನದಿಂದ ವಂಚಿತವಾಗಿವೆ.

 • ಬಳ್ಳಾರಿ
 • ಶಿವಮೊಗ್ಗ
 • ತುಮಕೂರು
 • ಧಾರವಾಡ
 • ಬೆ.ಗ್ರಾಮಾಂತರ
 • ಕೋಲಾರ
 • ಕೊಡಗು
 • ಚಿತ್ರದುರ್ಗ
 • ಬೆಳಗಾವಿ
 • ಬಾಗಲಕೋಟೆ
 • ಚಿಕ್ಕಮಗಳೂರು 
 • ಕೊಪ್ಪಳ 
 • ಯಾದಗಿರಿ
 • ಉಡುಪಿ

ಇನ್ನು ಈ ಬಾರಿ ಜಾತಿವಾರು ಸಿಕ್ಕಿರುವ ಪ್ರಾತಿನಿಧ್ಯ ಇಂತಿದೆ

 • ಒಕ್ಕಲಿಗ - 6
 • ಕುರುಬ - 2
 • ಲಿಂಗಾಯತ - 5
 • ದಲಿತ - 3
 • ಬ್ರಾಹ್ಮಣ - 1
 • ಕ್ರೈಸ್ತ - 1
 • ಮುಸ್ಲಿಂ - 2
 • ಉಪ್ಪಾರ -1
 • ರೆಡ್ಡಿ -1
 • ಈಡಿಗ - 1

ಜಿಲ್ಲಾವಾರು ಪ್ರಾತಿನಿಧ್ಯ 

 • ಹಾಸನ - 2
 • ಮೈಸೂರು - 2
 • ಬೀದರ್  - 2
 • ಮಂಡ್ಯ - 1
 • ರಾಯಚೂರು - 1
 • ಚಾಮರಾಜನಗರ - 2
 • ರಾಮನಗರ - 1
 • ಚಿಕ್ಕಬಳ್ಳಾಪುರ - 2
 • ಉತ್ತರ ಕನ್ನಡ - 1
 • ಗದಗ - 1
 • ದಾವಣಗೆರೆ - 1
 • ಬೆಂಗಳೂರು - 3
 • ವಿಜಯಪುರ - 1
 • ಕಲಬುರಗಿ - 1
 • ದಕ್ಷಿಣ ಕನ್ನಡ - 1

ಬೆಂಗಳೂರಿಗೆ 3 ಸಚಿವ ಸ್ಥಾನಗಳನ್ನು ನೀಡಲಾಗಿದ್ದು, ಇದೇ ಹೆಚ್ಚಿನ ಸಂಖ್ಯೆಯಾಗಿದೆ. 

loader