ಚಿದಂಬರಂ ಮನೆಗೆ ಕನ್ನ:ಕದ್ದೊಯ್ದರು ನಗದು, ಚಿನ್ನ!

First Published 8, Jul 2018, 3:06 PM IST
Cash, jewels stolen from Congress leader P. Chidambaram's house
Highlights

ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಮನೆಗೆ ಕನ್ನ

ನಗದು, ಚಿನ್ನಾಭರಣ ಕದ್ದೊಯ್ದ ಖದೀಮರು

ಮನೆಗೆಲಸದವರ ಮೇಲೆ ಪೊಲೀಸರ ಶಂಕೆ
 

ಚೆನ್ನೈ(ಜು.8): ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಮನೆ ಕಳ್ಳತನವಾಗಿದೆ. ಚಿದಂಬರಂ ಮನೆಗೆ ನುಗ್ಗಿದ ಕಳ್ಳರು ಎರಡು ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದಾರೆ.

1.5 ಲಕ್ಷ ನಗದು, ಮತ್ತು ಒಂದು ಲಕ್ಷ ರೂ. ಮೌಲ್ಯದ ಆಭರಣಗಳು ಕೆಲ ದಿನಗಳಿಂದ ಚಿದಂಬರಂ ಮನೆಯಿಂದ ಕಾಣೆಯಾಗಿವೆ ಎಂದು ದೂರು ದಾಖಲಾಗಿದೆ ಎಂದು ಹಿರಿಯ ಪೋಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮಾಜಿ ಸಚಿವರ ಮನೆಯಲ್ಲಿ ಕೆಲಸ ಮಾಡುವವರ ಕೈವಾಡ ಇದರಲ್ಲಿದೆ ಎಂದು ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


 

loader