500 ಹಾಗೂ 1000 ರೂ ನೋಟುಗಳ ಅಮಾನ್ಯ ಹಿನ್ನೆಯಲ್ಲಿ ಹೊಸ ನೋಟು ಮುದ್ರಣಕ್ಕೆ ಅಗತ್ಯವಿರುವ ಮುದ್ರಣ ಕಾಗದವನ್ನು ಮುಂದಿನ ವಾರ ವಿದೇಶದಿಂದ ಆಮದು ಮಾಡಿಕೊಳ್ಳುವ ಸಾಧ್ಯತೆಯಿದೆ.

ನವದೆಹಲಿ (ಡಿ.15): 500 ಹಾಗೂ 1000 ರೂ ನೋಟುಗಳ ಅಮಾನ್ಯ ಹಿನ್ನೆಯಲ್ಲಿ ಹೊಸ ನೋಟು ಮುದ್ರಣಕ್ಕೆ ಅಗತ್ಯವಿರುವ ಮುದ್ರಣ ಕಾಗದವನ್ನು ಮುಂದಿನ ವಾರ ವಿದೇಶದಿಂದ ಆಮದು ಮಾಡಿಕೊಳ್ಳುವ ಸಾಧ್ಯತೆಯಿದೆ.

20 ಸಾವಿರ ಟನ್ ಆಮದು ಮಾಡಿಕೊಳ್ಳುವ ಅಗತ್ಯವಿದೆ. ಈ ವರ್ಷ ಈಗಾಗಲೇ 8 ಸಾವಿರ ಟನ್ ಮುದ್ರಣ ಕಾಗದವನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯದ ಸಭೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.

ಇದೊಂದು ದೊಡ್ಡ ಪ್ರಮಾಣದ ಆಮದಾಗಿದ್ದು ಮುಂದಿನ ಒಂದು ವರ್ಷಕ್ಕೆ ಹಣವನ್ನು ಮುದ್ರಿಸಲು ಅಗತ್ಯವಿರುವ ಮುದ್ರಣ ಕಾಗದವನ್ನು ತರಿಸಿಕೊಳ್ಳಲಾಗುತ್ತಿದೆ. ಹಿಂದೆ ಆಮದು ಮಾಡಿಕೊಂಡ ಪ್ರಮಾಣಕ್ಕಿಂತ ದಾಖಲೆ ಪ್ರಮಾಣದ ಆಮದು ಇದಲ್ಲ. ಈಗ ಬಹುಪಾಲು ನೋಟಿನ ಮುದ್ರಣ ಕಾಗದವನ್ನು ನಾವೇ ತಯಾರಿಸಿಕೊಳ್ಳುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರತಿವರ್ಷ ನೋಟು ತಯಾರಿಕೆಗೆ 25 ಸಾವಿರ ಟನ್ ಮುದ್ರಣ ಕಾಗದ ಬಳಕೆಯಾಗುತ್ತಿದೆ. ಅದರಲ್ಲಿ 18 ಸಾವಿರ ಟನ್ ಗಳಷ್ಟು ಕಾಗದವನ್ನು ಆರ್ ಬಿಐ ತಯಾರಿಸುತ್ತದೆ. 2017 ರ ಮಧ್ಯದ ತನಕ ಸಾಕಾಗುವಷ್ಟು ಬ್ಯಾಂಕ್ ನೋಟ್ ಸಂಗ್ರಹವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.