ಧಾರವಾಡ [ಜೂ.15] :  ಕಂದಾಯ ಸಚಿವ ಆರ್‌.ವಿ.ದೇಶ​ಪಾಂಡೆ ಅವರ ಕಾರಿಗೆ ದಾರಿ ಬಿಡಲು ವಿಳಂಬ ಮಾಡಿದ ಆರೋ​ಪದ ಮೇಲೆ ಸಾರಿಗೆ ಬಸ್‌ ಚಾಲಕನ ವಿರುದ್ಧ ಪ್ರಕ​ರಣ ದಾಖ​ಲಿ​ಸಲು ಸಚಿ​ವರ ಆಪ್ತ ಕಾರ್ಯ​ದರ್ಶಿ ಸೂಚನೆ ನೀಡಿದ ಘಟನೆ ಶುಕ್ರವಾರ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಹಳೆ ಬಸ್‌ನಿಲ್ದಾಣ ಮುಂಭಾಗ ಈ ಘಟನೆ ನಡೆದಿದೆ. ಹೊಸವಾಳಕ್ಕೆ ಹೊರಟಿದ್ದ ಬಸ್‌, ನಿಲ್ದಾಣದಿಂದ ಹೊರ ಬರುವ ವೇಳೆ ಏಕಾಏಕಿ ದೇಶಪಾಂಡೆ ಅವರ ವಾಹನ ಬಂದಿದೆ. 

ಇದನ್ನು ಗಮ​ನಿ​ಸದ ಚಾಲಕ ಬಸ್‌ ಚಾಲನೆ ಮಾಡಿದ್ದಾರೆ. ಈ ವೇಳೆ ಸಚಿವರ ವಾಹನಕ್ಕೆ ದಾರಿ ಬಿಡಲಿಲ್ಲ ಎಂದು ಕೋಪದಿಂದ ಸಚಿವರ ಆಪ್ತ ಚಾಲಕನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಜತೆಗೆ ಬಸ್‌ ಚಾಲಕನ ಮೇಲೆ ಪ್ರಕರಣ ದಾಖಲಿಸುವಂತೆ ಪೊಲೀಸರ ಮೇಲೆ ಒತ್ತಡವನ್ನೂ ಹೇರಿದ್ದಾರೆ ಎಂದೂ ತಿಳಿದು ಬಂದಿದೆ.