ವೇಗದ ಬೌಲರ್ ಶಮಿ ಕ್ಲೀನ್ ಬೌಲ್ಡ್! ಪ್ರಕರಣ ದಾಖಲಿಸಿದ ಪೊಲೀಸರು

First Published 9, Mar 2018, 3:22 PM IST
Case Registered Against Pace Bowler Mohammed Shami
Highlights
  • ತಮ್ಮ ಪತಿ ಶಮಿ ತನ್ನ ಮೇಲೆ ಹಲ್ಲೆ ನಡೆಸುತ್ತಾರಲ್ಲದೇ, ಪರಸ್ತ್ರೀ ಜೊತೆ ಸಂಬಂಧಗಳನ್ನು ಹೊಂದಿದ್ದಾರೆ
  • ಬೌಲರ್ ಮೊಹಮದ್ ಶಮಿ ಹಾಗೂ ಕುಟುಂಬದ ಇತರ ನಾಲ್ಕು ಮಂದಿಯ ವಿರುದ್ಧ ದೂರು

ಕೋಲ್ಕತ್ತಾ: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮದ್ ಶಮಿ ಹಾಗೂ ಕುಟುಂಬದ ಇತರ ನಾಲ್ಕು ಮಂದಿಯ ವಿರುದ್ಧ ಪತ್ನಿ ಹಸೀನ್ ಜಹಾನ್  ಕೋಲ್ಕತ್ತಾದ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಿಲಿಸಿದ್ದಾರೆ ಎಂದು ಎನ್’ಐ ವರದಿ ಮಾಡಿದೆ.

ತಮ್ಮ ಪತಿ ಶಮಿ ತನ್ನ ಮೇಲೆ ಹಲ್ಲೆ ನಡೆಸುತ್ತಾರಲ್ಲದೇ, ಪರಸ್ತ್ರೀ ಜೊತೆ ಸಂಬಂಧಗಳನ್ನು ಹೊಂದಿದ್ದಾರೆ, ಎಂದು ಹಸೀನ್ ಜಹಾನ್ ನಿನ್ನೆ ಆರೋಪಿಸಿದ್ದರು.

ಆರೋಪಕ್ಕೆ ಪೂರಕವಾಗಿ ಫೇಸ್'ಬುಕ್'ನಲ್ಲಿ ಎಸ್'ಎಂ'ಎಸ್'ಗಳ ಮಾಹಿತಿ, ಭಾವಚಿತ್ರಗಳು ಹಾಗೂ ಮೊಬೈಲ್ ಸಂಖ್ಯೆಯ ಜೊತೆ ಮಹಿಳೆಯ ಭಾವಚಿತ್ರವನ್ನು ಪೋಸ್ಟ್ ಮಾಡಿದ್ದರು.

ಶಮಿ ಹಾಗೂ ಆತನ ಕುಟುಂಬ ಸದಸ್ಯರು ನಿರಂತರ ಕಿರುಕುಳ ನೀಡುತ್ತಿದ್ದು, ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಈ ಬಗ್ಗೆ ಟ್ವಿಟರ್'ನಲ್ಲಿ ಪ್ರತಿಕ್ರಿಯೆ ನೀಡಿರುವ ಶಮಿ 'ನನ್ನ ಖಾಸಗಿ ಜೀವನದ ಮೂಡಿಬಂದಿರುವ ವರದಿಗಳೆಲ್ಲವೂ ಆಧಾರರಹಿತ. ಇದು ನನ್ನ ವಿರುದ್ಧ ಮಾಡಲಾಗಿರುವ ಪಿತೂರಿ ಹಾಗೂ ನನ್ನ ವೃತ್ತಿ ಜೀವನವನ್ನು ಕೆಡಿಸಬೇಕೆಂದು ಈ ರೀತಿ ಮಾಡಲಾಗುತ್ತಿದೆ' ಎಂದು ತಿಳಿಸಿದ್ದಾರೆ.

loader