Asianet Suvarna News Asianet Suvarna News

10 ರು ನಾಣ್ಯ ನಿರಾಕರಿಸಿದ್ರೆ ಹುಷಾರ್..!

10 ರು. ನಾಣ್ಯವನ್ನು ನಿರಾಕರಿಸಿದ್ರೆ ಎಚ್ಚರ. ನಿಮಗೂ ಬೀಳುತ್ತೆ ದಂಡ. 10 ರು ನಿರಾಕರಿಸಿ ನೀವು ಅದಕ್ಕೂ 10 ಪಟ್ಟು ಕಳೆದುಕೊಳ್ಳಬಹುದು. ಮಧ್ಯ ಪ್ರದೇಶದಲ್ಲಿ ಓರ್ವ ಅಂಗಡಿ ಮಾಲಿಕ 10 ರು ನಾಣ್ಯ ನಿರಾಕರಿಸಿದ್ದು ಆತನಿಗೆ 200ರು. ದಂಡ ವಿಧಿಸಲಾಗಿದೆ. 

Case against Shopkeeper for not accepting Rs 10 coins
Author
Bengaluru, First Published Aug 1, 2018, 3:12 PM IST

ಮಧ್ಯಪ್ರದೇಶ :  ಮಧ್ಯಪ್ರದೇಶದ ಗ್ರಾಹಕರಿಂದ 10 ರು. ಮೌಲ್ಯದ ನಾಣ್ಯ ಸ್ವೀಕರಿಸಲು ನಿರಾಕರಿಸಿದ ಅಂಗಡಿ ಮಾಲೀಕರೊಬ್ಬರಿಗೆ 200 ರು. ದಂಡ ವಿಧಿಸಲಾಗಿದೆ.

ಈ ಬಗ್ಗೆ ವಿಚಾರಣೆ ನಡೆಸಿದ ಮೊರೆನಾ ಜಿಲ್ಲೆಯ ನ್ಯಾಯಾಲಯ, ಅಂಗಡಿ ಮಾಲೀಕ ಅರುಣ್ ಜೈನ್‌ಗೆ ಈ ಶಿಕ್ಷೆ ವಿಧಿಸಿದೆ. 2017 ರ ಅಕ್ಟೋಬರ್‌ನಲ್ಲಿ ಜೈನ್ ಅವರ ಅಂಗಡಿಗೆ ಆಗಮಿಸಿದ್ದ ಆಕಾಶ್ ಎಂಬಾತ, ಎರಡು ಕರವಸ್ತ್ರಗಳ ಖರೀದಿಗಾಗಿ 10 ರುಪಾಯಿಯ ಎರಡು ನಾಣ್ಯಗಳನ್ನು ನೀಡಿದ್ದರು.

ಆದರೆ, 10 ರು. ನಾಣ್ಯಗಳನ್ನು ಸ್ವೀಕರಿಸಿರಲಿಲ್ಲ. ಈ ಸಂಬಂಧ ಆಕಾಶ್ ದೂರು ದಾಖಲಿಸಿದ್ದರು. 

Follow Us:
Download App:
  • android
  • ios