ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ವಾಹನ ಸವಾರರೊಬ್ಬರು ಬಲಿಯಾಗಿದ್ದಾರೆ.  ಹೆದ್ದಾರಿಗೆ ಸ್ಕೈ ವಾಕ್ ನಿರ್ಮಿಸಲು ತೋಡಿದ್ದ ಪಾಯದ ಗುಂಡಿಗೆ ಕಾರು ಬಿದ್ದು  ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು ಮೂವರು ಗಂಭೀರ ಗಾಯಗೊಂಡಿದ್ದಾರೆ.  

ಆನೇಕಲ್ (ಜೂ. 18): ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ವಾಹನ ಸವಾರರೊಬ್ಬರು ಬಲಿಯಾಗಿದ್ದಾರೆ. ಹೆದ್ದಾರಿಗೆ ಸ್ಕೈ ವಾಕ್ ನಿರ್ಮಿಸಲು ತೋಡಿದ್ದ ಪಾಯದ ಗುಂಡಿಗೆ ಕಾರು ಬಿದ್ದು ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು ಮೂವರು ಗಂಭೀರ ಗಾಯಗೊಂಡಿದ್ದಾರೆ. 

ಸರಿಯಾಗಿ ಸೂಚನಾ ಫಲಕ ಹಾಗೂ ಯಾವುದೇ ಬ್ಯಾರಕೇಡ್ ಇಲ್ಲದಿರುವುದೇ ಅಪಘಾತಕ್ಕೆ ಕಾರಣವಾಯಿತು. ಪರಮ ಶಿವಂ(56) ಮೃತಪಟ್ಟ ದುರ್ದೈವಿ. ಬಾಸ್ಕರನ್ ಸತೀಶ್ ಹಾಗೂ ಸತ್ಯರಾಜ್ ಗಂಭೀರ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.