Asianet Suvarna News Asianet Suvarna News

ಕಿದ್ವಾಯಿಯಲ್ಲಿ ಕ್ಯಾನ್ಸ್'ರ್'ಗೆ ಆಯುರ್ವೇದ ಚಿಕಿತ್ಸೆ

ಹಲವು ವರ್ಷಗಳ ಹಿಂದೆ ಕಿದ್ವಾಯಿ ಸಂಸ್ಥೆಯಲ್ಲಿ ಆಯುರ್ವೇದ ಚಿಕಿತ್ಸಾ ಘಟಕ ಇತ್ತು. ಘಟಕದ ವೈದ್ಯರು ನಿವೃತ್ತಿಯಾದ ನಂತರ ಬೇರೆ ವೈದ್ಯರ ನಿಯೋಜನೆಯಾಗದೆ ಕಾರ್ಯ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಘಟಕ ಪುನಾರಾರಂಭಗೊಂಡಿದೆ. ಇದರಿಂದ ಅಲೋಪತಿಯ ಜತೆಗೆ ಆಯುರ್ವೇದದ ಚಿಕಿತ್ಸೆಯನ್ನೂ ಯಾವೆಲ್ಲಾ ಹಂತಗಳಲ್ಲಿ ಪ್ರಯೋಗಿಸಬಹುದು ಎಂಬ ಬಗ್ಗೆ ಸಂಶೋಧನೆ ನಡೆಸಲು ಸಹಕಾ ರಿಯಾಗಲಿದೆ.

Cancer treatment in KIDWAI hospital

ಬೆಂಗಳೂರು(ಏ.13): ಕ್ಯಾನ್ಸರ್‌ ರೋಗ ಗುಣಪಡಿಸಲು ಅಲೋಪತಿ ಯೊಂದಿಗೆ ಆಯುರ್ವೇದ ಚಿಕಿತ್ಸೆಯೂ ಮುಖ್ಯ. ಹಾಗಾಗಿ ಕಿದ್ವಾಯಿ ಸಂಸ್ಥೆಯಲ್ಲಿ ಆಯುರ್ವೇದ ಚಿಕಿತ್ಸಾ ಘಟಕವನ್ನು ಪುನಾರಂಭಿಸಲಾಗಿದೆ ಎಂದು ಕಿದ್ವಾಯಿ ಸಂಸ್ಥೆ ನಿರ್ದೇಶಕ ಡಾ. ಕೆ.ಬಿ. ಲಿಂಗೇಗೌಡ ತಿಳಿಸಿದ್ದಾರೆ. 
ಬುಧವಾರ ನಗರದ ಕಿದ್ವಾಯಿ ಸಂಸ್ಥೆ ಆವರಣದಲ್ಲಿ ನಿರ್ಮಿಸಲಾಗಿರುವ ನೂತನ ‘ಉಪ ಶಾಮಕ ಆರೈಕೆ ಕೇಂದ್ರ ಹಾಗೂ ಆಯುರ್ವೇದ ಚಿಕಿತ್ಸಾ ಘಟಕ' ಉದ್ಘಾಟಿಸಿ ಅವರು ಮಾತನಾಡಿದರು. ಕ್ಯಾನ್ಸರ್‌ ಗುಣಪಡಿಸಲು ಅಲೋಪತಿ ಜತೆಗೆ ಆಯುರ್ವೇದ ಚಿಕಿತ್ಸೆಯ ಅಗತ್ಯವೂ ಇದೆ. ಎರಡೂ ಚಿಕಿತ್ಸೆ ಬಳಸಿಕೊಂಡು ಚಿಕಿತ್ಸೆ ನೀಡಬಹುದು. ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ವಿಶೇಷವಾಗಿ ಕಿಮೋಥೆರಪಿ, ರೇಡಿಯೋಥೆರಪಿಯಂತಹ ಚಿಕಿತ್ಸೆ ವೇಳೆ ಉಂಟಾಗುವ ರಕ್ತ ಕಣಗಳ ಸಂಖ್ಯೆ ಕ್ಷೀಣಿಸುವಿಕೆ, ಇನ್ನಿತರ ಸಮಸ್ಯೆಗಳನ್ನು ಸರಿಪಡಿಸಲು ಅಲೋಪತಿಗಿಂತ ಆಯುರ್ವೇದ ಚಿಕಿತ್ಸೆ ಉತ್ತಮ. ಏಕೆಂದರೆ ಆಯುರ್ವೇದ ಚಿಕಿತ್ಸೆಗೆ ಕಡಿಮೆ ವೆಚ್ಚ ತಗುಲುತ್ತದೆ ಎಂದರು. 
ಹಲವು ವರ್ಷಗಳ ಹಿಂದೆ ಕಿದ್ವಾಯಿ ಸಂಸ್ಥೆಯಲ್ಲಿ ಆಯುರ್ವೇದ ಚಿಕಿತ್ಸಾ ಘಟಕ ಇತ್ತು. ಆ ಘಟಕದ ವೈದ್ಯರು ನಿವೃತ್ತಿಯಾದ ನಂತರ ಬೇರೆ ವೈದ್ಯರ ನಿಯೋಜನೆಯಾಗದೆ ಕಾರ್ಯ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಆ ಘಟಕ ಪುನಾರಾರಂಭಗೊಂಡಿದೆ. ಇದರಿಂದ ಅಲೋಪತಿಯ ಜತೆಗೆ ಆಯುರ್ವೇದದ ಚಿಕಿತ್ಸೆಯನ್ನೂ ಯಾವೆಲ್ಲಾ ಹಂತಗಳಲ್ಲಿ ಪ್ರಯೋಗಿಸಬಹುದು ಎಂಬ ಬಗ್ಗೆ ಸಂಶೋಧನೆ ನಡೆಸಲು ಸಹಕಾ ರಿಯಾಗಲಿದೆ. ಘಟಕಕ್ಕೆ ಆಯುಷ್‌ ಇಲಾಖೆ ಅಗತ್ಯ ಔಷಧಿಗಳನ್ನು ಒದಗಿಸಲಿದೆ ಎಂದು ಹೇಳಿದರು. 
ಕಾರ್ಯಕ್ರಮದಲ್ಲಿ ರಾಜ್ಯ ಉಪಶಾಮಕ ಆರೈಕೆ ಸಮನ್ವಯ ಅಧಿಕಾರಿ ಡಾ.ಪಿ.ರಮಾಮಣಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ.ರೇಖಾ.ಎಸ್‌, ಆಯುಷ್‌ನ ಜಂಟಿ ನಿರ್ದೇಶಕಿ ಎಸ್‌.ಅಹಲ್ಯಾ ಮತ್ತಿತರರು ಉಪಸ್ಥಿತರಿದ್ದರು. 
ಗುಣಪಡಿಸಲಾಗದ ಕಾಯಿಲೆಗಳಿಗೆ ತುತ್ತಾಗಿರುವ ಅಥವಾ ಸಾವಿನಂಚಿಗೆ ತಲುಪಿರುವ ರೋಗಿಗಳು ಆರೈಕೆ ಮಾಡುವ ಸಲುವಾಗಿ ‘ಉಪಶಾಮಕ ಆರೈಕೆ ಕೇಂದ್ರ' ಆರಂಭಿಸಲಾಗಿದೆ ಎಂದು ಡಾ. ಲಿಂಗೇಗೌಡ ತಿಳಿಸಿದರು. 
ಸಾವಿನಂಚಿನಲ್ಲಿರುವ ಎಚ್‌ಐವಿ ಸೋಂಕಿ ತರು, ಕ್ಯಾನ್ಸರ್‌, ಮೂತ್ರಪಿಂಡ ಸಮಸ್ಯೆ ಮತ್ತಿತರ ಕಾಯಿಲೆಗಳಿಗೆ ತುತ್ತಾಗಿ ಗುಣ ಪಡಿಸಲಾಗದಂತಹ ಸ್ಥಿತಿಗೆ ತಲುಪಿರುವವರು, ಸಾಂಕ್ರಾಮಿಕವಲ್ಲದ ಗುಣಪಡಿಸಲಾಗದ ಕಾಯಿಲೆಗಳು, ದೀರ್ಘ ಕಾಲಿಕ ಅನಾರೋ ಗ್ಯದ ಜೀವನ ಇವುಗಳು ನೋವುಭರಿತ ಸಾವಿಗೆ ಕಾರಣವಾಗುತ್ತದೆ. ಇಂತಹ ರೋಗಿ ಗಳಿಗೆ ಸಾವಿತನಕ ಸುದೀರ್ಘಕಾಲದ ಆರೈಕೆಯ ಅಗತ್ಯವಿದೆ. ಕಾಲಕ್ರಮೇಣ ಉಲ್ಬಣಗೊಳ್ಳುವ ನೋವು, ವಾಕರಿಕೆ, ವಾಂತಿ, ಉಸಿರಾಟದ ತೊಂದರೆ ಮತ್ತಿ ತೀವ್ರತರವಾದ ಸಮಸ್ಯೆಗಳ ಸಂದರ್ಭದಲ್ಲಿ ಆರೈಕೆ ಮಾಡುವುದು ಈ ಕೇಂದ್ರಗಳ ಕೆಲಸವಾಗಿದೆ ಎಂದು ಹೇಳಿದರು.
ಪ್ರಸ್ತುತ ನಗರಕ್ಕೆ ಸೀಮಿತವಾಗಿರುವ ಈ ಉಪಶಾಮಕ ಆರೈಕೆ ಕೇಂದ್ರದ ಸೌಲಭ್ಯವನ್ನು ಮುಂದಿನ ದಿನಗಳಲ್ಲಿ ಮೈಸೂರು, ಮಂಗಳೂರು, ಶಿವಮೊಗ್ಗ, ರಾಯಚೂರು, ಹುಬ್ಬಳ್ಳಿಯಲ್ಲಿ ಆರಂಭಿಸಲಾಗುವುದು. ಗ್ರಾಮೀಣ ಭಾಗಗಳಿಗೂ ವಿಸ್ತರಿಸುವ ಯೋಚನೆ ಇದೆ ಎಂದರು. 

Follow Us:
Download App:
  • android
  • ios