ತಿರುವನಂತಪುರಂ (ಸೆ.27): ಕೇರಳದಲ್ಲಿ ಬೀದಿ ನಾಯಿಗಳ ಉಪಟಳ ತೀವ್ರವಾಗಿದೆ. ನಾಯಿ ಕಡಿತದ ಪ್ರಕರಣಗಳು ವಿಪರೀತವಾಗಿ ಹೆಚ್ಚುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೀದಿ ನಾಯಿಗಳ ಉಪಟಳಕ್ಕೆ ನಿಯಂತ್ರಣ ಹಾಕುವಂತೆ ಕೇರಳ ಕಾಂಗ್ರೆಸ್ ಎಂ ಯುವದಳದ ಸದಸ್ಯರು ಆಗ್ರಹಿಸಿದ್ದಾರೆ.

ಐದು ಸತ್ತ ನಾಯಿಗಳ ಕಾಲುಗಳನ್ನು ಬಿದಿರಿನ ಕೋಲಿಗೆ ಬಿಗಿದು ನೇತಾಡಿಸಲಾದ ಸ್ಥಿತಿಯಲ್ಲಿ ಕೋಟ್ಟಯಂನ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. 

ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ಸೂಕ್ತ ಹಾಗೂ ತ್ವರಿತ ಕ್ರಮ ತೆಗೆದುಕೊಳ್ಳದಿದ್ದರೆ ಶ್ವಾನ ಸಂಹಾರ ಅಭಿಯಾನವನ್ನು ತೀವ್ರಗೊಳಿಸುತ್ತೇವೆ ಎಂಬ ಎಚ್ಚರಿಕೆ ನೀಡಿದ್ದಾರೆ.

(ಸಾಂದರ್ಭಿಕ ಚಿತ್ರ)