ಗಂಡಂದಿರೇ ಹೆಂಡತಿಗೆ ಬಯ್ಯುವ ಮುನ್ನ ಎಚ್ಚರ ..!

Calling wife 'kali kaluti' ground for divorce: Punjab and Haryana HC
Highlights

ಗಂಡಂದಿರೇ ಇನ್ನುಮುಂದೆ ನಿಮ್ಮ ಹೆಂಡತಿಗೆ ಬಯ್ಯುವ ಮುನ್ನ ಎಚ್ಚರ ವಹಿಸಿ. ಆಕೆಯ ಬಣ್ಣದ ಬಗ್ಗೆ ತೆಗುವ ಮುನ್ನ ಯೋಚಿಸಿ.  ಯಾಕೆಂದರೆ ನೀವಯ ಆಕೆಯನ್ನು ಕಪ್ಪು - ಕರಿ ಎಂದು ಕರೆದಿದ್ದೇ ಆದಲ್ಲಿ  ದುಷ್ಕೃತ್ಯ ಹಾಗೂ ಕ್ರೌರ್ಯ ಎಸಗಿರುವ ಅಪರಾಧದ ಅಡಿಯಲ್ಲಿ ನಿಮಗೆ ವಿಚ್ಛೇದನವನ್ನು ನೀಡಬಹುದು. 
 

ಚಂಡೀಗಢ :  ಗಂಡಂದಿರೇ ಇನ್ನುಮುಂದೆ ನಿಮ್ಮ ಹೆಂಡತಿಗೆ ಬಯ್ಯುವ ಮುನ್ನ ಎಚ್ಚರ ವಹಿಸಿ. ಆಕೆಯ ಬಣ್ಣದ ಬಗ್ಗೆ ತೆಗಳುವ ಮುನ್ನ ಯೋಚಿಸಿ.  ಯಾಕೆಂದರೆ ನೀವು ಆಕೆಯನ್ನು ಕಪ್ಪು - ಕರಿ ಎಂದು ಕರೆದಿದ್ದೇ ಆದಲ್ಲಿ  ದುಷ್ಕೃತ್ಯ ಹಾಗೂ ಕ್ರೌರ್ಯ ಎಸಗಿರುವ ಅಪರಾಧದ ಅಡಿಯಲ್ಲಿ ನಿಮಗೆ ವಿಚ್ಛೇದನವನ್ನು ನೀಡಬಹುದು. 
 
ಹೀಗೆಂದು ಹರ್ಯಾಣ ಮತ್ತು ಪಂಜಾಬ್ ಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ. ಮಹೇಂದ್ರ ಗರ್ ಪ್ರದೇಶದ ಮಹಿಳೆಯೋರ್ವರು, ಆಕೆಯ ಗಂಡ ಬಣ್ಣದ ಬಗ್ಗೆ ಹೀಗಳೆಯುತ್ತಿರುವುದಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಸಾರ್ವಜನಿಕವಾಗಿಯೇ ಆಕೆಯ ಬಣ್ಣದ  ತೆಗಳುತ್ತಿದ್ದ. ಅಲ್ಲದೇ ಬಣ್ಣ ಕಪ್ಪೆಂದು ಗಂಡನ ಮನೆಗೂ ಕೂಡ ಸೇರಿಸುತ್ತಿರಲಿಲ್ಲ ಎಂದು ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.  

ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಎಂ.ಎಂ. ಎಸ್. ಬೇಡಿ ನೇತೃತ್ವದ ನ್ಯಾಯಪೀಠ ಆಕೆ ಮಾನಸಿಕವಾಗಿ ಹೆಚ್ಚು ನೋವನ್ನು ಅನುಭವಿಸಿದ್ದಾರೆ. ಬಣ್ಣದ ಬಗ್ಗೆ ಹೀಗಳೆದರೆ ಗಂಡನಿಗೆ ವಿಚ್ಛೇದನ ನೀಡಬಹುದು ಎಂದು  ಆದೇಶ ನೀಡಿದೆ.

loader